ನನಗೆ ಮಾಟ ಮಾಡಿಸಿದವರನ್ನ ಶಿಕ್ಷಿಸಿದರೆ 50,001 ಕಾಣಿಕೆ ಕೊಡ್ತಿನಿ – ಸೌದತ್ತಿ ಯಲ್ಲಮ್ಮನಿಗೆ ಪತ್ರ  

1 min read

ನನಗೆ ಮಾಟ ಮಾಡಿಸಿದವರನ್ನ ಶಿಕ್ಷಿಸಿದರೆ 50,001 ಕಾಣಿಕೆ ಕೊಡ್ತಿನಿ – ಸೌದತ್ತಿ ಯಲ್ಲಮ್ಮನಿಗೆ ಪತ್ರ

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. ಹಣದ ಜೊತೆಗೆ ಭಕ್ತರು ತಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಚಿತ್ರ ವಿಚಿತ್ರ ಪತ್ರಗಳುಗಳನ್ನ ದೇವಸ್ಥಾನ ಹುಂಡಿಯಲ್ಲಿ ಹಾಕಿದ್ದಾರೆ.

ಏಳು ಕೊಳ್ಳದ ಯಲ್ಲಮ್ಮದೇವಿಗೆ ಹಣದ ಅಮೀಷವೂಡ್ಡಿದ್ದ ಭಕ್ತ..!

ನನಗೆ ಮಾಟ ಮಂತ್ರ ಮಾಡಿಸಿದವರಿಗೆ ಶಿಕ್ಷೆ ನೀಡಿದರೆ 50,001 ಕಾಣಿಕೆ ನೀಡುವುದಾಗಿ ಪತ್ರ ಬರೆದು ಭಕ್ತನೊಬ್ಬ ದೇವರಿಗೇ ಆಮಿಷ ಒಡ್ಡಿದ್ದಾನೆ.  ನನ್ನ ವ್ಯವಹಾರಕ್ಕೆ ಮಾಟ ಮಂತ್ರ ಮಾಡಿಸಿದ್ದಾರೆ, ಇದರಿಂದ ಸಾಲಗಾರರ ಕಾಟ ಶುರುವಾಗಿದೆ.

ಆನ್ ಲೈನ್ ಗೇಮ್ ನಲ್ಲಿ ಕಳೆದುಕೊಂಡ ಹಣ ಮರಳಿ ಬರುವಂತೆ ಮಾಡು ತಾಯಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆನ್ ಲೈನ್ ಗೇಮ್ ಆಡಲು ಮನಸ್ಸು ಬರದಂತೆ ಮಾಡು ಎಂದು ಭಕ್ತ ಮನವಿ ಮಾಡಿಕೊಂಡಿದ್ದಾನೆ.   ಮರಾಠಿ ಭಾಷೆಯಲ್ಲೂ ದೇವಿ ಹುಂಡಿಗೆ ಪತ್ರ ಹಾಕಿ ಬೇಡಿಕೆ ಇಟ್ಟ ಭಕ್ತರು

ಎರಡು ದಿನಗಳ ಕಾಲ ದೇವಸ್ಥಾನದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು,  40 ದಿನದಲ್ಲಿ 1.13 ಕೋಟಿ ರೂ. ನಗದು ಸಂಗ್ರಹವಾಗಿದೆ.  22 ಲಕ್ಷ‌ ರೂ.ಮೌಲ್ಯದ ಬಂಗಾರ, 3.86ಲಕ್ಷ ರೂ ಮೌಲ್ಯದ ಬೆಳ್ಳಿ ಆಭರಣಗಳು ಹುಂಡಿಯಲ್ಲಿ ಪತ್ತೆಯಾಗಿವೆ.

ಹಣದ ಜೊತೆ ಪತ್ರಗಳನ್ನೂ ಸಹ ಹುಂಡಿಯಲ್ಲಿ ಹಾಕಲಾಗಿದೆ.  ಪತ್ರವನ್ನು ಹುಂಡಿಗೆ ಹಾಕಿದ್ರೆ ದೇವಿ ಕೋರಿಕೆ ಈಡೇರಿಸುತ್ತಾಳೆಂಬ ನಂಬಿಕೆ ಜನರಲ್ಲಿದೆ.  ಭಕ್ತರ ವಿಚಿತ್ರ ಕೋರಿಕೆ ಪತ್ರಗಳನ್ನ ಕಂಡು ಹುಂಡಿ ಎಣಿಕೆ ಸಿಬ್ಬಂದ್ಧಿಗಳೇ ಶಾಕ್ ಆಗಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd