ಜೀವನ ತುಕಾಲಿ ಅಂದ್ರು ಶಿವರಾಜ್ ಕೆ.ಆರ್.ಪೇಟೆ.. ಇದು ‘ಧಮಾಕಾ’ ಸಾಂಗ್ ಝಲಕ್!
ಸ್ಯಾಂಡಲ್ ವುಡ್ ನ ಬಹುಬೇಡಿಕೆ ಹಾಸ್ಯ ಕಲಾವಿದರ ಬಳಗದಲ್ಲಿ ಗುರುತಿಸಿಕೊಂಡಿರುವ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಧಮಾಕಾ ಸಿನಿಮಾದ ಬೊಂಬಾಟ್ ಟ್ರ್ಯಾಕ್ ನಂಬರ್ ರಿಲೀಸ್ ಆಗಿದೆ. ತುಕಾಲಿ ಜೀವನ ಅನ್ನೋ ಕಚಗುಳಿ ಇಡುವ ಹಾಡು ಆನಂದ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ. ನಿರ್ದೇಶಕ ಲಕ್ಷ್ಮೀ ರಮೇಶ್ ಬರೆದಿರುವ ಹಾಡಿಗೆ
ಕಂಚಿನ ಕಂಠದ ಗಾಯಕ ನವೀನ್ ಸಜ್ಜು ಕಂಠ ಕುಣಿಸಿದ್ದು, ವಿಕಾಸ್ ವಸಿಷ್ಠ ಮ್ಯೂಸಿಕ್ ನೀಡಿದ್ದಾರೆ.
ಈ ಹಿಂದೆ ರಿಲೀಸ್ ಆಗಿದ್ದ ಧಮಾಕಾ ಟೀಸರ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಈಗ ರಿಲೀಸ್ ಆಗಿರುವ ತುಕಾಲಿ ಹಾಡು ಕೂಡ ಸಂಚಲನ ಸೃಷ್ಟಿಸಿದೆ.
ಈ ಹಿಂದೆ ಸಿಂಪಲ್ ಸುನಿ ಬಳಗದಲ್ಲಿ ಗುರುತಿಸಿಕೊಂಡಿರುವ ಪ್ರತಿಭಾನ್ವಿತ ನಿರ್ದೇಶಕ ಲಕ್ಷ್ಮೀ ರಮೇಶ್ ಧಮಾಕಾಗೆ ಆಕ್ಷನ್ ಕಟ್ ಹೇಳುವ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ.
ಕಾಮಿಡಿ ಕಿಲಾಡಿ ಶೋ ಮೂಲಕವೇ ಗುರುತಿಸಿಕೊಂಡಿರುವ ನಯನಾ ಶರತ್ ಶಿವರಾಜ್ ಕೆಆರ್ ಪೇಟೆಗೆ ಜೊತೆಯಾಗಿ ನಟಿಸ್ತಿದ್ದಾರೆ. ಉಳಿದಂತೆ ಸಿದ್ದು ಮೂಲಿಮನಿ, ಪ್ರಿಯಾ ಆಚಾರ್, ಪ್ರಕಾಶ್ ತುಂಬಿನಾಡ್, ಮೋಹನ್ ಜುನೇಜಾ, ಕೋಟೆ ಪ್ರಭಾಕರ್, ಮೈಕೋ ನಾಗರಾಜ್, ಅರುಣಾ ಬಾಲರಾಜ್ ಕಾಣಿಸಿಕೊಂಡಿದ್ದಾರೆ. ಎಸ್ಆರ್ ಮೀಡಿಯಾ ಪ್ರೊಡಕ್ಷನ್ಸ್ ಮತ್ತು ನಂದಿ ಎಂಟರ್ಟೇನ್ಮೆಂಟ್ಸ್ ಬ್ಯಾನರ್ನಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಸುನೀಲ್ ಎಸ್. ರಾಜ್ ಮತ್ತು ಅನ್ನಪೂರ್ಣ ಬಿ. ಪಾಟೀಲ್ ಬಂಡವಾಳ ಹಾಕಿದ್ದಾರೆ. ಹಾಲೇಶ್ ಕ್ಯಾಮೆರಾ, ವಿಕಾಸ್ ವಸಿಷ್ಠ ಮ್ಯೂಸಿಕ್, ವಿನಯ್ ಕೂರ್ಗ್ ಸಂಕಲನ ಧಮಾಕಾ ಸಿನಿಮಾದಲ್ಲಿರಲಿದೆ.