Dhanbad : ಎನ್ಕೌಂಟರ್’ನಲ್ಲಿ ಡಕಾಯಿತ ಹತ್ಯೆ
ಧನಬಾದ್ ಪೊಲೀಸರಿಂದ ಎನ್ ಕೌಂಟರ್
ಮುತ್ತೂಟ್ ಫೈನಾನ್ಸ್ ಗೆ ನುಗ್ಗಿದ್ದ ಡಕಾಯಿತ
ಪೊಲೀಸರ ಮೇಲೆ ದಾಳಿ ನಡೆಸಿದ್ದ ಡಕಾಯಿತು
ಪ್ರತಿ ದಾಳಿಯಲ್ಲಿ ಓರ್ವ ಡಕಾಯಿತ ಹತ್ಯೆ
ಜರ್ಖಾಂಡ್ : ಪೊಲೀಸರು ಮತ್ತು ಡಕಾಯಿತರ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಡಕಾಯಿತನನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.
ಜರ್ಖಾಂಡ್ ಧನಬಾದ್ ನಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 10:30ರ ಸುಮಾರಿಗೆ ಐವರು ಡಕಾಯಿತರು ಇಲ್ಲಿನ ಮುತ್ತೂಟ್ ಫೈನಾನ್ಸ್ ಕಚೇರಿಗೆ ದರೋಡೆ ಮಾಡುವ ಯೋಜನೆಯೊಂದಿಗೆ ಪ್ರವೇಶಿಸಿದ್ದಾರೆ.

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಈ ವೇಳೆ ಪೊಲೀಸರನ್ನು ಕಂಡ ಡಕಾಯಿತರು ಗುಂಡಿನ ದಾಳಿ ನಡೆಸಿದ್ದಾರೆ.
ಇತ್ತ ಪೊಲೀಸರೂ ಪ್ರತಿದಾಳಿ ನಡೆಸಿದ್ದು, ಗುಂಡಿನ ಚಕಮಕಿಯಲ್ಲಿ ಒಬ್ಬ ದರೋಡೆಕೋರ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.