ಮಾಜಿ ಸಂಸದರ ಪುತ್ರನ ಮೇಲೆ ಹಲ್ಲೆ
ಕುಡಿದ ಮತ್ತಿನಲ್ಲಿ ಮಾಜಿ ಸಂಸದನ ಪುತ್ರನ ಮೇಲೆ ಹಲ್ಲೆ
ಬೆಂಗಳೂರು : ಕುಡಿದ ಮತ್ತಿನಲ್ಲಿ ಧಾರವಾಡದ ಮಾಜಿ ಸಂಸದನ ಪುತ್ರನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಧಾರವಾಡ ಮಾಜಿ ಎಂಪಿ ಮಂಜುನಾಥ್ ಪುತ್ರ ಚಂದ್ರಶೇಖರ್ ಕುನ್ನೂರ್ ಮೇಲೆ ಹಲ್ಲೆ ನಡೆಸಲಾಗಿದೆ. Dharwad ex-MP son got hit by few people in a bar and resturant in bengaluru
ಊಟಕ್ಕೆ ಕರೆದು ಬೆಂಗಳೂರಿನ ಸೂಜಿ ಕ್ಯೂ ಕ್ಲಬ್ ನಲ್ಲಿ ಹಲ್ಲೆ ಮಾಡಲಾಗಿದೆ ಎಂದು ಚಂದ್ರಶೇಖರ್, ಚೇತನ್ ಹೆಗಡೆ ,ಪ್ರಶಾಂತ್ ರೆಡ್ಡಿ ವಿರುದ್ಧ ದೂರು ದಾಖಲಿಸಿದ್ದಾರೆ.
ಜನವರಿ 23 ರಂದು ಚಂದ್ರಶೇಖರ್ ಅವರನ್ನು ಚೇತನ್ ಹೆಗಡೆ, ಪ್ರಶಾಂತ್ ರೆಡ್ಡಿ, ಶಿವಾಜಿನಗರದ ಸೂಜಿ ಕ್ಯೂ ಕ್ಲಬ್ಗೆ ಊಟಕ್ಕೆ ಆಹ್ವಾನಿಸಿದ್ದರಂತೆ.
ಅಲ್ಲಿಗೆ ಹೋದ ನಂತರ ಊಟಕ್ಕೆ ಆರ್ಡರ್ ಮಾಡುವ ವೇಳೆ ಚಂದ್ರಶೇಖರ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರಂತೆ.
ಬಳಿಕ ಚಂದ್ರಶೇಖರ್ ಗೆ ಕಾಪಾಳಕ್ಕೆ ಹೊಡೆದು ನಾನು ಊಟ ಹಾಕಿದ್ದೀನಿ ತಿನ್ನೋ ಎಂದು ಧಮ್ಕಿ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖವಾಗಿದೆ.
ಅಲ್ಲಿಂದ ತಪ್ಪಿಸಿಕೊಳ್ಳಲು ಚಂದ್ರಶೇಖರ್ ಹೊಯ್ಸಳಕ್ಕೆ ಕರೆ ಮಾಡಿದ್ದು, ವಿಧಾನಸೌಧ ಠಾಣೆಗೆ ಬಂದ ದೂರು ನೀಡಿದ್ದಾರೆ.