DHFWS Bengaluru Urban Recruitment 2025 : ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಕರೆಯಲಾಗಿದೆ.
ಹುದ್ದೆ : ವೈದ್ಯಾಧಿಕಾರಿಗಳು, ಶುಶ್ರೂಷಣಾಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞರು.
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು ನಗರ ಜಿಲ್ಲೆ, ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 48 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.
ಹುದ್ದೆ ಹುದ್ದೆಗಳ ಸಂಖ್ಯೆ
ವೈದ್ಯಾಧಿಕಾರಿಗಳು 19
ಶುಶ್ರೂಷಣಾಧಿಕಾರಿಗಳು 16
ಪ್ರಯೋಗಶಾಲಾ ತಂತ್ರಜ್ಞರು 13
ಶೈಕ್ಷಣಿಕ ಅರ್ಹತೆ :
• ವೈದ್ಯಾಧಿಕಾರಿಗಳು – ಎಂ.ಬಿ.ಬಿ.ಎಸ್ ಉತ್ತೀರ್ಣರಾಗಿ ಕಡ್ಡಾಯವಾಗಿ ಇಂಟರ್ನಶಿಪ್ ಪೂರೈಸಿ ಕೆ.ಎಂ.ಸಿ ನೋಂದಣಿ ಹೊಂದಿರತಕ್ಕದ್ದು.
• ಶುಶ್ರೂಷಣಾಧಿಕಾರಿಗಳು – ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಲ್ಲಿ ಬಿ.ಎಸ್.ಸಿ/ ಜಿ.ಎನ್.ಎಂ ತರಬೇತಿ ಹಾಗೂ ಕೆ.ಎನ್.ಸಿ ನೋಂದಣಿ ಹೊಂದಿ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
• ಪ್ರಯೋಗಶಾಲಾ ತಂತ್ರಜ್ಞರು – ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯು ನಡೆಸುವ ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ ಮೂರು ವರ್ಷದ ಕೋರ್ಸ್ ನಲ್ಲಿ ಉತ್ತೀರ್ಣ ಹೊಂದಿರಬೇಕು.
ವಯೋಮಾನ : ವೈದ್ಯಾಧಿಕಾರಿಗಳು ಹುದ್ದೆ ಹೊರತುಪಡಿಸಿ ಉಳಿದ ಹುದ್ದೆಗಳಿಗೆ ಈ ಕೆಳಗಿನಂತೆ ವಯೋಮಾನ ನಿಗದಿಪಡಿಸಲಾಗಿದೆ.
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – ಗರಿಷ್ಠ 35 ವರ್ಷ
• 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ಗರಿಷ್ಠ 38 ವರ್ಷ
• ಪ.ಜಾತಿ/ಪ.ಪಂಗಡ/ ಪ್ರ1ರ ಅಭ್ಯರ್ಥಿಗಳಿಗೆ – ಗರಿಷ್ಠ 40 ವರ್ಷ
• ವೈದ್ಯಾಧಿಕಾರಿಗಳು – ಗರಿಷ್ಠ 60 ವರ್ಷ
ವೇತನ :
ವೈದ್ಯಾಧಿಕಾರಿಗಳು 60,000
ಶುಶ್ರೂಷಣಾಧಿಕಾರಿಗಳು 18,714
ಪ್ರಯೋಗಶಾಲಾ ತಂತ್ರಜ್ಞರು 16,515
ಆಯ್ಕೆ ವಿಧಾನ : ನೇರ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆಯ ವಿಧಾನ : ನೇರ ಸಂದರ್ಶನದ ಮೂಲಕ
ಸಂದರ್ಶನ ಸ್ಥಳ : ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಆವರಣ, ಹಳೇ ಟಿ.ಬಿ ಆಸ್ಪತ್ರೆ, ಹಳೇ ಮದ್ರಾಸ್ ರಸ್ತೆ, ಸ್ವಾಮಿ ವಿವೇಕಾನಂದ ಮೇಟ್ರೋ ನಿಲ್ದಾಣದ ಹತ್ತಿರ, ಇಂದಿರಾನಗರ, ಬೆಂಗಳೂರು – 38
ಸಂದರ್ಶನ ನಡೆಯುವ ದಿನಾಂಕದ ವಿವರ :
ನೇರ ಸಂದರ್ಶನ ನಡೆಯುವ ದಿನಾಂಕ : ಮೇ 19, 2025 ಬೆಳಿಗ್ಗೆ 11.00 ಗಂಟೆಗೆ








