ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ ಡ್ರೀಮ್‌ಲೈನರ್ 787-8 ವಿಮಾನ ಭೀಕರವಾಗಿ ಪತನಗೊಂಡ ಪರಿಣಾಮ, ವಿಮಾನದಲ್ಲಿದ್ದ 265 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರೂ ಸೇರಿದ್ದಾರೆ ಎಂಬ ದುಃಖದ ಸುದ್ದಿಯು ಚರ್ಚೆಗೆ ಗ್ರಾಸವಾಗಿದ್ದು, ಇದರಲ್ಲಿ ಒಂದಿಷ್ಟು ವಿಚಿತ್ರ ಸಂಗತಿಗಳೂ ಗಮನ ಸೆಳೆದಿವೆ.
ಈ ಘಟನೆಯ ದಿನಾಂಕ ಜೂನ್ 12 (12/06) ಆಗಿತ್ತು. ಪತನಗೊಂಡ ವಿಮಾನದಲ್ಲಿ ವಿಜಯ್ ರೂಪಾನಿಗೆ ಸೀಟ್ ನಂ. 12 ಹಾಕಲಾಗಿತ್ತು. ಇಷ್ಟೇ ಅಲ್ಲದೆ, ವರದಿಗಳ ಪ್ರಕಾರ ಅವರ ಮನೆಯಲ್ಲಿರುವ ಎಲ್ಲಾ ವಾಹನಗಳ ನಂಬರಗಳು ಸೇರಿಸಿದಾಗ 1206 (12/06) ಬರುತ್ತದೆ. ಈ ಎಲ್ಲ ಅಂಕಿ-ಅಂಶಗಳು ರೂಪಾನಿ ಅವರ ಅದೃಷ್ಟದ ಸಂಖ್ಯೆಯಾಗಿ ಪ್ರಸಿದ್ಧವಾಗಿದ್ದ 12-06ನ್ನು ಸೂಚಿಸುತ್ತಿರುವುದರಿಂದ, ಇದೀಗ ಅದೃಷ್ಟವೇ ಅಶುಭವಾಯಿತೇ? ಎಂಬ ಪ್ರಶ್ನೆ ಕಾಡತೊಡಗಿದೆ.
ವಿಮಾನದ ಬ್ಲ್ಯಾಕ್‌ಬಾಕ್ಸ್ ಪತ್ತೆಯಾಗಿದ್ದು, ವಿಮಾನ ಏಕೆ ಪತನಗೊಂಡಿತು ಎಂಬುದರ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ತಾಂತ್ರಿಕ ದೋಷವೋ ಅಥವಾ ಹವಾಮಾನ ವೈಪರೀತ್ಯ ಕಾರಣವೋ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ವಿಜಯ್ ರೂಪಾನಿಯ ರಾಜಕೀಯ ಜೀವನ ಹಾಗೂ ವೈಯಕ್ತಿಕ ಹಿನ್ನಲೆ ಪರಿಗಣಿಸಿದರೆ, 12 ಮತ್ತು 1206 ಸಂಖ್ಯೆಗಳನ್ನು ಅವರು ಅದೃಷ್ಟದ ಸಂಖ್ಯೆ ಎಂದು ಅಂದುಕೊಂಡಿದ್ದಾಗಿ ಅವರ ಕುಟುಂಬದವರು ಹೇಳುತ್ತಾರೆ. ಆದರೆ ಈ ಸಲ, ಅದೇ ಸಂಖ್ಯೆ ಮರಣದ ದಿನಾಂಕ, ಸೀಟ್ ನಂಬರ್ ಮತ್ತು ವಾಹನ ನಂಬರಗಳಲ್ಲಿ ಎದ್ದುಕಂಡಿರುವುದು, ಅಚ್ಚರಿ ಮೂಡಿಸಿದೆ.
ಭೀಕರ ವಿಮಾನ ಅಪಘಾತದಲ್ಲಿ ರಾಜಕೀಯ ಹಿರಿಯ ಮುಖಂಡರು ಸೇರಿದಂತೆ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದು, ದೇಶವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.