ದೇಶದ ಚಿತ್ರರಂಗದಲ್ಲಿ ಭಾರೀ ಸದ್ದು ಮಾಡಿರುವ ಕೆಜಿಎಫ್ ಬಗ್ಗೆ ಮತ್ತೊಂದು ಅಪ್ಡೇಟ್ ಸಿಕ್ಕಿದೆ. ಯಶ್ ನನಗೆ ಕರೆ ಮಾಡಿದ್ದರು. ಮಾತನಾಡುತ್ತ, ನೀವು ಕೆಜಿಎಫ್ 3ಗೆ ಸಿದ್ಧವಾಗಬೇಕು ಎಂದು ಹೇಳಿದರು. ನಾನು ಈ ಬಾರಿಯೂ ನನ್ನ ಸಾಯಿಸಬೇಡಿ ಎಂದು ಹೇಳಿದೆ ಎಂದು ನಾಯಕಿ ನಟಿ ಹೇಳಿದ್ದು, ಸದ್ಯ ಕೆಜಿಎಫ್ 3 ಬಗ್ಗೆ ದೊಡ್ಡ ಅಪ್ಡೇಟ್ ಸಿಕ್ಕಂತಾಗಿದೆ.
ಮೂರನೇ ಭಾಗ ಬರುವುದೋ, ಇಲ್ಲವೋ ಎಂಬ ಗೊಂದಲಗಳ ನಡುವ ಬಾಲಿವುಡ್ ನಟಿ ರವೀನಾ ಟಂಡನ್ ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ.
ಬಾಲಿವುಡ್ ಸ್ಪೈ ಎಂಬ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರವೀನಾ ಟಂಡನ್ ‘ಕೆಜಿಎಫ್ 3’ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಕೆಜಿಎಫ್ 2 ಚಿತ್ರದ ವಾರ್ಷಿಕೋತ್ಸವ ಆಚರಿಸಲಾಯಿತು. ನನಗೆ ಕಾಲ್ ಮಾಡಿದ ಮೊದಲ ವ್ಯಕ್ತಿ ಯಶ್ ಪತ್ನಿ ರಾಧಿಕಾ. ರಮಿಕಾ ಸೇನ್ ಪಾತ್ರವನ್ನು ನೀವಲ್ಲದೆ ಬೇರೆ ಯಾರಿಂದಲೂ ಮಾಡಲಾಗುತ್ತಿರಲಿಲ್ಲ ಎಂದು ಹೇಳಿ ನನಗೆ ಶುಭ ಕೋರಿದರು. ಸಂಜೆ ಯಶ್ ಕರೆ ಮಾಡಿದ್ದರು, ಇಬ್ಬರೂ ಶುಭಾಶಯ ವಿನಿಮಯ ಮಾಡಿಕೊಂಡೆವು. ಆಗ ಯಶ್ ನೀವು ‘ಕೆಜಿಎಫ್ 3’ಗೆ ರೆಡಿ ಆಗಬೇಕು ಎಂದರು. ಮೊದಲ ಸೀನ್ನಲ್ಲೇ ನನ್ನನ್ನು ದಯವಿಟ್ಟು ಸಾಯಿಸಬೇಡಿ ಎಂದು ನಾವಿಬ್ಬರೂ ಜೋಕ್ ಮಾಡಿಕೊಂಡು ನಕ್ಕೆವು ಎಂದು ಹೇಳಿದ್ದಾರೆ.