ಬೆಂಗಳೂರು : ಕೊರೊನಾ ಕಾಟದ ನಡುವೆಯೂ ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ನಟ ದಿಗಂತ್ ಮತ್ತು ನಟಿ ಐಂದ್ರಿತಾ ರೇ ಔಟಿಂಗ್ ಹೋಗಿದ್ದಾರೆ. ಕೊರೊನಾ ಲಾಕ್ ಡೌನ್ ಹಿನ್ನೆಲೆ ಮೂರು ತಿಂಗಳುಗಳ ಕಾಲ ಮನೆಯಲ್ಲೇ ಕಳೆದ ಈ ಜೋಡಿ ಲಾಕ್ ಡೌನ್ ಸಡಿಲಿಕೆ ಆಗುತ್ತಿದ್ದಂತೆ ಕುಟುಂಬದ ಜೊತೆ ಜಾಲಿ ಟ್ರಪ್ ಹೋಗಿದ್ದಾರೆ.
ದಿಗಂತ್ ಮತ್ತು ನಟಿ ಐಂದ್ರಿತಾ ರೇ ಕೂರ್ಗ್ ಗೆ ಕುಟುಂಬದವರ ಜೊತೆ ಪ್ರವಾಸಕ್ಕೆ ಹೋಗಿದ್ದಾರೆ. ತಾವು ಪ್ರವಾಸಕ್ಕೆ ಹೋಗಿರುವ ಫೋಟೋಗಳನ್ನು ನಟಿ ಐಂದ್ರಿತಾ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಶೇಷ ಎಂದರೆ ಈ ಜೋಡಿ ತಮ್ಮ ಟ್ರಿಪ್ ಗೆ ಎರಡು ನಾಯಿಗಳನ್ನು ಕೂಡ ಕರೆದುಕೊಂಡು ಹೋಗಿದ್ದಾರೆ.
https://www.instagram.com/p/CB3T6AEFkEz/?utm_source=ig_web_button_share_sheet
ಅಂದಹಾಗೆ ಪ್ರೀತಿಸಿ ಮದುವೆಯಾದ ಐಂದ್ರಿತಾ ಮತ್ತು ದಿಗಂತ್ ಗೆ ಟ್ರಿಪ್, ಟ್ರಕ್ಕಿಂಗ್ ಎಂದರೆ ತುಂಬಾ ಇಷ್ಟ. ಆದ್ದರಿಂದ ಈ ದಂಪತಿ ಆಗಾಗ ಜಾಲಿ ಟ್ರಿಪ್ ಹೋಗುತ್ತಿದ್ದರು. ಸದ್ಯಕ್ಕೆ ಲಾಕ್ ಡೌನ್ ಸಡಿಲಿಕೆ ಆಗಿರುವುದರಿಂದ ಕೂರ್ಗ್ನಲ್ಲಿ ಪ್ರಕೃತಿ ಸೌಂದ್ಯರ್ಯ ಸವಿಯುತ್ತಿದ್ದಾರೆ.