ನಟ ದರ್ಶನ್ (Darshan) ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಬಿಡುಗಡೆಗಾಗಿ ತೂಗುದೀಪ್ ಕುಟುಂಬಸ್ಥರು ಈಗ ದೇವರ ಮೊರ ಹೋಗಿದ್ದಾರೆ.
ದರ್ಶನ್ ರನ್ನು ಕಾಪಾಡುವಂತೆ ಅವರ ಕುಟುಂಬ ಸದಸ್ಯರು ದೇವರ ಮೊರೆ ಹೋಗಿದ್ದಾರೆ. ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ್ (Dinakar Thoogudeepa) ದಂಪತಿ ಜೊತೆ ನಟ ಚಿಕ್ಕಣ್ಣ ಚಾಮುಂಡಿ ತಾಯಿಯ ದರ್ಶನ ಪಡೆದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಮೈಸೂರಿನಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ದರ್ಶನ್ ಸಹೋದರ ದಿನಕರ್ ತೂಗುದೀಪ್ ಕುಟುಂಬದ ಜೊತೆ ಚಿಕ್ಕಣ್ಣ ಕೂಡ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಣ್ಣನನ್ನು ಸಂಕಷ್ಟದಿಂದ ಪಾರು ಮಾಡುವಂತೆ ದಿನಕರ್ ತಾಯಿಯಲ್ಲಿ ಪ್ರಾರ್ಥಿಸಿದ್ದಾರೆ.
ಇಂದು ಪತ್ನಿ ವಿಜಯಲಕ್ಷ್ಮೀ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ವಿಜಯಲಕ್ಷ್ಮಿ ಚಂಡಿಕಾ ಯಾಗ ಮಾಡಿಸಿದ್ದಾರೆ. ಪತಿಯನ್ನು ಸಂಕಷ್ಟದಿಂದ ಪಾರಾಗಲಿ ಎಂದು ದೇವಿಗೆ ವಿಜಯಲಕ್ಷ್ಮಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.








