ರಾಯಪುರ: ಛತ್ತಿಸ್‌ಗಢ ರಾಜ್ಯದ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ನೇರಾನೇರ ಫೈಟ್ ಸೃಷ್ಟಿಯಾಗಿದೆ.
ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆಯಿಂದಲೇ ಆರಂಭವಾಗಿದ್ದು, ಎರಡೂ ಪಕ್ಷಗಳು ಜಿದ್ದಾಜಿದ್ದಿ ನಡೆಸುತ್ತಿವೆ. ಸದ್ಯದ ಮಾಹಿತಿಯಂತೆ ಆರಂಭದಲ್ಲಿ ಬಿಜೆಪಿ 30, ಕಾಂಗೆಸ್ 49, ಇತರೇ 1 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದವು. ಸುಮಾರು 10 ಗಂಟೆ ವೇಳೆ ಬಿಜೆಪಿ 42, ಕಾಂಗ್ರೆಸ್ 46 ಹಾಗೂ ಇತರೇ 2 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಸದ್ಯ ಈ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದೆ.