ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರೋಜ್‌ಗಾರ್ ಮೇಳ ಯೋಜನೆಯಡಿ ನೂತನವಾಗಿ ಸರ್ಕಾರಿ ಉದ್ಯೋಗಕ್ಕೆ ನೇಮಕಗೊಂಡಿರುವ ಸುಮಾರು 51 ಸಾವಿರಕ್ಕೂ ಅಧಿಕ ಜನರಿಗೆ ನೇಮಕಾತಿ ಪತ್ರ ವಿತರಿಸಲಿದ್ದಾರೆ.
ಮೋದಿ ಅವರು ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ಪತ್ರಗಳನ್ನು ವಿತರಿಸಲಿದ್ದಾರೆ. ಈ ಯೋಜನೆಯಡಿ ದೇಶಾದ್ಯಂತ 45 ಪ್ರದೇಶಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ರೋಜ್‌ಗಾರ್ ಮೇಳ ಯೋಜನೆಯಡಿ ದೇಶಾದ್ಯಂತ ಗೃಹ ಸಚಿವಾಲಯ, ಕೇಂದ್ರೀಯ ಸಶಸ್ತ್ರ ಪಡೆ, ಕೇಂದ್ರೀಯ ಪೊಲೀಸ್ ಪಡೆ, ಗಡಿ ಭದ್ರತಾ ಪಡೆ, ಗಡಿ ಪೊಲೀಸ್ ಮತ್ತು ದೆಹಲಿ ಪೊಲೀಸ್ ಪಡೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸರ್ಕಾರವು ಸಿಬ್ಬಂದಿಗಳನ್ನು ನೇಮಿಸಿಕೊಳ್ಳುತ್ತದೆ. ಸುಮಾರು 10 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ಪ್ರಧಾನಿ ಮೋದಿ 2022ರ ಅಕ್ಟೋಬರ್‌ನಲ್ಲಿ ರೋಜ್‌ಗಾರ್ ಮೇಳ ಉದ್ಘಾಟಿಸಿದ್ದರು. ಈ ಹಿನ್ನೆಲೆಯಲ್ಲಿ ನೇಮಕಾತ್ರಿ ಪತ್ರ ವಿತರಿಸಲಿದ್ದಾರೆ.