ಮಂಡ್ಯ: ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲುವಿಗೆ ಬಿಜೆಪಿ ಸಹಕಾರ ದೊಡ್ಡದಿದೆ ಎಂದು ಹೇಳಿಕೆ ನೀಡಿರುವ ಡಿಕೆ ಶಿವಕುಮಾರ್ (DK Shivakumar) ಅವರ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.
ಡಿಕೆಶಿ ನಮ್ಮ ಮಧ್ಯೆ ತಂದಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಗೆದ್ದಿದ್ದೇವೆ ಎಂದು ಕಾಂಗ್ರೆಸ್ ನವರು ಬೀಗುತ್ತಿದ್ದಾರೆ. ಈ ಗೆಲುವು ಶಾಶ್ವತ ಅಲ್ಲ. ಹಿಂದೆ ನಾವು ಕೂಡ ಹಲವು ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಗೆದ್ದಿದ್ದೇವೆ. ಆದರೆ, ಇವರು ಮೂರು ಕ್ಷೇತ್ರ ಗೆದ್ದು ಬೀಗುತ್ತಿದ್ದಾರೆ ಎಂದು ಗುಡುಗಿದ್ದಾರೆ.
ಇದು ಹಣ ಬಲದ ಮೇಲೆ ನಡೆದ ಚುನಾವಣಎ. ನಾವು ಸಂಪೂರ್ಣ ಮನಸ್ಸಿನಿಂದ ಚುನಾವಣೆ ಮಾಡಿದ್ದೇವೆ. ನಿಖಿಲ್‌ಗೆ ಅದೃಷ್ಟ ಇರಲಿಲ್ಲ. ನಿಖಿಲ್‌ಗೆ ಮುಂದೆ ಒಳ್ಳೆಯ ಭವಿಷ್ಯವಿದೆ. ಬೆಳಗ್ಗೆ ಹೆಚ್‌ಡಿಕೆ, ನಿಖಿಲ್‌ಗೆ ಕರೆ ಮಾಡಿ ಧೈರ್ಯ ಹೇಳಿದ್ದೀನಿ. ಮುಂಬರುವ ಚುನಾವಣೆಯಲ್ಲಿ ಒಟ್ಟಾಗಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಡಿಕೆ ಸುರೇಶ್ ಸೋಲಿಸಲು ಸಿದ್ದರಾಮಯ್ಯ ಕಾರಣ ಅಲ್ವಾ? ಅದನ್ನ ಡಿಕೆಶಿ ಒಪ್ಪಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದ್ದಾರೆ. ದು ಪ್ರಶ್ನಿಸಿದ್ದಾರೆ.








