ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆ, ಸಚಿವ ಸಂಪುಟ ಪುನರ್ ರಚನೆ, ಹಾಗೂ ಮುಂದಿನ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ಈಗ ತೀವ್ರಗೊಂಡಿವೆ. ಈ ಹಿನ್ನೆಲೆ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ಪಷ್ಟನೆ ನೀಡುತ್ತಾ, ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣರಾಗಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ ಅವರು,
ನನ್ನನ್ನು ಮುಖ್ಯಮಂತ್ರಿ ಮಾಡಿ ಅಂತ ನಾನು ಯಾವತ್ತೂ ಕೇಳಿಲ್ಲ. ನಾನು ಕೇಳಿದ ದಾಖಲೆ ಯಾರಲ್ಲಾದರೂ ಇದ್ದರೆ ತೋರಿಸಲಿ. ನಾನು ನನ್ನ ಕೆಲಸ ಮಾಡ್ತಿದ್ದೇನೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಬರುತ್ತದೆ ಎಂದು ಹೇಳಿದ್ದಾರೆ.
ಬಸವರಾಜ ರಾಯರೆಡ್ಡಿ ಮತ್ತು ಡಿವಿ ಸದಾನಂದ ಗೌಡ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಗಳನ್ನು ಕುರಿತು ಪ್ರಶ್ನಿಸಿದಾಗ ಡಿಕೆಶಿ ತಿರುಗೇಟು ನೀಡುತ್ತಾ,
ಅವರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ನಾನು ಅವರ ವಕ್ತಾರ ಅಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಡೆಯುತ್ತಿರುವ ಊಹಾಪೋಹಗಳಿಗೆ ಡಿಕೆಶಿಯ ಈ ಹೇಳಿಕೆ ಹೊಸ ತಿರುವು ತಂದಿದೆ.
ರಾಜಕೀಯ ಚಟುವಟಿಕೆ, ಪಕ್ಷದ ಒಳ ಒತ್ತಡಗಳು ಹಾಗೂ ಸಚಿವ ಸಂಪುಟ ಪುನಾರಚನೆ ಬಗ್ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಳವಣಿಗೆಗಳು ಸಂಭವಿಸುವ ನಿರೀಕ್ಷೆಯಿದೆ.








