ಇತ್ತೀಚೆಗೆ ಇಡಿ (ಎನ್‌ಫೋರ್ಸ್‌ಮೆಂಟ್ ಡಿರೆಕ್ಟರೇಟ್) ಅಧಿಕಾರಿಗಳಿಂದ ನಡೆದ ದಾಳಿಯ ನಂತರ, ಕಾಂಗ್ರೆಸ್ ನಾಯಕ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಗೃಹ ಸಚಿವ ಪರಮೇಶ್ವರ್ ಮನೆಗೆ ಭೇಟಿ ನೀಡಿ, ಅವರ ಜತೆ ಸಮಾಲೋಚನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಿಕೆಶಿ, ಪರಮೇಶ್ವರ್ ಅವರಂಥ ಗೌರವಾನ್ವಿತ ವ್ಯಕ್ತಿ ಬೇರೆಯವರಿಗೆ ಸ್ಮಗ್ಲಿಂಗ್ ಮಾಡುವಂತೆ ಹೇಳುವುದು ಸಾಧ್ಯವೇ? ಮದುವೆ ಅಥವಾ ಸಭೆ ಸಮಾರಂಭಗಳಲ್ಲಿ ಅನೇಕ ಮಂದಿ ಉಡುಗೊರೆ ಕೊಡುತ್ತಾರೆ. ಅದು ತಪ್ಪು ಎಂದಾದರೂ, ತನಿಖೆ ನಡೆಯಲಿ, ಸತ್ಯ ಬಯಲಾಗಲಿ. ಆದರೆ ಪರಮೇಶ್ವರ್ ಅವರು ಕಾನೂನಿಗೆ ಯಾವತ್ತೂ ತಲೆಬಾಗುವ ವ್ಯಕ್ತಿ. ಅವರು ಯಾವುದೇ ತಪ್ಪು ಮಾಡಿಲ್ಲ, ಎಂದು ಬೆಂಬಲ ನೀಡಿದರು.
ಇನ್ನೊಬ್ಬ ಮಹಿಳೆಯ ವಿರುದ್ಧ ಆರೋಪಗಳಿದ್ದರೆ, ಆಕೆ ತಪ್ಪು ಮಾಡಿದ್ದರೆ ಕಾನೂನು ಕ್ರಮ ಜರುಗಿಸಲಿ ಎಂದು ತಮ್ಮ ನಿಲುವನ್ನೂ ಡಿಕೆಶಿ ಸ್ಪಷ್ಟಪಡಿಸಿದರು. ಆಕೆಗೆ ಶಿಕ್ಷೆ ಕೊಟ್ಟರೆ ನಮಗೆ ಯಾವುದೇ ವಿರೋಧವಿಲ್ಲ. ಆದರೆ ಪರಮೇಶ್ವರ್ ಅವರನ್ನು ಈ ಪ್ರಕ್ರಿಯೆಯಲ್ಲಿ ಎಳೆಯುವುದು ನ್ಯಾಯವಲ್ಲ, ಎಂದು ಹೇಳಿದರು.








