ಮೈತ್ರಿಗೆ ಆಹ್ವಾನ ಕೊಟ್ಟಿದ್ದು ಡಿ.ಕೆ.ಶಿವಕುಮಾರ್ : ಸಾ.ರಾ.ಮಹೇಶ್
1 min read
ಮೈತ್ರಿಗೆ ಆಹ್ವಾನ ಕೊಟ್ಟಿದ್ದು ಡಿ.ಕೆ.ಶಿವಕುಮಾರ್ : ಸಾ.ರಾ.ಮಹೇಶ್
ಮೈಸೂರು : ಮೇಯರ್ ಚುನಾವಣೆ ವಿಚಾರವಾಗಿ ಕುಮಾರಸ್ವಾಮಿ ಬಳಿ ಮಾತನಾಡಿ ಮೈತ್ರಿಗೆ ಮನವಿ ಮಾಡಿದ್ದು ಡಿ.ಕೆ.ಶಿವಕುಮಾರ್ ಅವರೇ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.
ಮೈಸೂರು ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಗೆ ಕಾಂಗ್ರೆಸ್ ಬೆಂಬಲ ಸೂಚಿಸಿದ್ದು, ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದರಲ್ಲೂ ಈ ಮೈತ್ರಿಯಿಂದಾಗಿ ಈಗ ಕಾಂಗ್ರೆಸ್ ಎರಡು ಭಾಗಗಳಾಗಿದೆ.
ಈ ಮಧ್ಯೆ ಮೈಸೂರು ಮೇಯರ್ ಚುನಾವಣೆ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಾ.ರಾ.ಮಹೇಶ್, ಚುನಾವಣೆಯಲ್ಲಿ ನಾವು ಬಿಜೆಪಿನೂ ಬೇಡ, ಕಾಂಗ್ರೆಸ್ ಕೂಡ ಬೇಡ ಅಂತಾ ನಿರ್ಧಾರ ಮಾಡಿ ತನ್ವೀರ್ ಸೇಠ್ ಗೆ ತಿಳಿಸಿದ್ದೇವು.
ದರೂ ತನ್ವೀರ್ ಅವರು ಮಧ್ಯೆ ರಾತ್ರಿ ಕಾಲ್ ಮಾಡಿದ್ದರು, ನಾನು ರಿಸೀವ್ ಮಾಡಿರಲಿಲ್ಲ. ಬಳಿಕ ಚುನಾವಣೆ ದಿನ ಬೆಳಗ್ಗೆ 11 ಗಂಟೆಗೆ ಕರೆ ಮಾಡಿ ಮೇಯರ್ ಸ್ಥಾನ ನೀವೇ ಇಟ್ಕೊಳ್ಳಿ, ಉಪ ಮೇಯರ್ ನಮಗೆ ಕೊಡಿ ಅಂತಾ ತನ್ವೀರ್ ಸೇಠ್ ಹೇಳಿದ್ದರು ನಾವು ಒಪ್ಪಿರಲಿಲ್ಲ. ಅಂದೇ ಅದೇ ದಿನ 11.30 ಕ್ಕೆ ಡಿ.ಕೆ.ಶಿವಕುಮಾರ್ ಕರೆ ಮಾಡಿ ಮೈತ್ರಿಗೆ ಬನ್ನಿ ಅಂತಾ ಕೇಳಿದ್ದರು ಎಂದು ಹೇಳಿದರು.
ಡಿಕೆಶಿ ಬಳಿಕ ತನ್ವೀರ್ ಸೇಠ್ ಅವರು ಮತ್ತೆ ನನಗೆ ಕರೆ ಮಾಡಿದ್ದರು. ಆಗ ನಾವು ನಮ್ಮ ಸದಸ್ಯರ ತೀರ್ಮಾನಕ್ಕೆ ಬಿಟ್ಟೆವು. ಸ್ವತಂತ್ರವಾಗಿ ನಮ್ಮ ಶಕ್ತಿ ತೋರಿಸಲು ನಿರ್ಧಾರ ಮಾಡಿದ್ದೇವು.
ಇದಾದ ಬಳಿಕ ನನಗೆ ಡಿಕೆ ಶಿವಕುಮಾರ್ ಕರೆ ಮಾಡಿದ್ರು, ಆಗ ಕುಮಾರಸ್ವಾಮಿ ಅವರ ಜೊತೆ ಮಾತಾಡಿದ್ರು ಅಂತಾ ಸಾ ರಾ ಮಹೇಶ್ ಹೇಳಿದ್ದಾರೆ.
