ಕಳೆದ ವರ್ಷ ಘೋಷಣೆ ಮಾಡಿದ್ದೇ ಯಾರ ಕೈಸೇರಿಲ್ಲ : ಪ್ಯಾಕೇಜ್ ಬಗ್ಗೆ ಡಿಕೆಶಿ ಪ್ರತಿಕ್ರಿಯೆ
ಬೆಂಗಳೂರು : ಕಳೆದ ವರ್ಷ ಘೋಷಣೆ ಮಾಡಿದ್ದೇ ಯಾರ ಕೈಸೇರಿಲ್ಲ ಎಂದು ಸಿಎಂ ವಿಶೇಷ ಪ್ಯಾಕೇಜ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಹೀಗೆ ಲಾಕ್ ಡೌನ್ ಪ್ಯಾಕೇಜ್ ಘೋಷಣೆ ಮಾಡಿದರು. ಸರಿಯಾಗಿ ಹಣ ಕೊಡಲಿಲ್ಲ. ಈಗ ಸರಿಯಾಗಿ ಪ್ಯಾಕೇಜ್ ಹಂಚಿಕೆ ಮಾಡ್ತಾರೆ ಅನ್ನೋ ಗ್ಯಾರಂಟಿ ಇಲ್ಲಾ.
ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಸಾವಿರ ಪಂಚಾಯ್ತಿ ಮೂಲಕ ಕೊಡಬೇಕು. ಇದು ಕೊಡಬೇಕು ಅಂತ ಕೊಟ್ಟಿರೋದಲ್ಲ. ನಾವೆಲ್ಲಾ ಒತ್ತಾಯ ಮಾಡಿದೆವು ಅಂತ ಏನೋ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಬಡವರ ಬಗ್ಗೆ ಚಿಂತನೆ ಮಾಡುವಂತ ಸರ್ಕಾರ ಅಂತು ಇದಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ಸರ್ಕಾರದ ಫ್ಯಾಕೇಜ್ ಕೊಡುವ ವಿಧಾನವೇ ಸಂಪೂರ್ಣ ಫೈಲ್ಯೂರ್ ಆಗಿದ್ದು, ಇಂದಿರಾ ಕ್ಯಾಂಟೀನ್ ಊಟಕ್ಕೆ ಆಧಾರ್ ಕಾರ್ಡ್ ಐಡಿ ಕಾರ್ಡ್ ತನ್ನಿ ಅಂದಿದ್ದರು.
ನಾವು ಹೇಳಿದ ಮೇಲೆ ವಾಪಸ್ ಪಡೆದರು. ಕಾರ್ಮಿಕರು ಶ್ರಮಿಕ ವರ್ಗಕ್ಕೆ ಏನು ಇಲ್ಲಾ. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕಳೆದ ವರ್ಷ ಘೋಷಣೆ ಮಾಡಿದ್ದೇ ಯಾರ ಕೈಸೇರಿಲ್ಲ.
ಹತ್ತು ಲಕ್ಷ ಡ್ರೈವರ್ ಇದ್ದಾರೆ ಎಂದು ಹೇಳಿ ಎರಡು ಲಕ್ಷ ಜನರಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಪರಿಹಾರ ಹಂಚಿಕೆ ವಿಧಾನ ಸರಿ ಇಲ್ಲ. ಪರಿಹಾರ ಹಂಚುವ ಜವಾಬ್ದಾರಿ ಗ್ರಾಮ ಪಂಚಾಯ್ತಿಗೆ ಕೊಡಿ.
ಅವರು ಮಡಿವಾಳ, ಕ್ಷೌರಿಕ ಹೂ ಮಾರುವವನು, ಆರ್ಚಕರು, ಅಡಿಗೆ ಮಾಡುವವನು ಎಲ್ಲರೂ ಅವರಿಗೆ ಗೊತ್ತಾಗುತ್ತೆ. ಹಳ್ಳಿ ಜನ ಮೋಸ ಮಾಡದೇ ಎಲ್ಲರಿಗೂ ಕೊಡ್ತಾರೆ ಎಂದು ಸಲಹೆ ನೀಡಿದರು.