`ಸೋಲು ಸಾಧ್ಯವಿಲ್ಲ’ : ಇವಿಎಂ ಬಗ್ಗೆ ಡಿ.ಕೆ.ಸುರೇಶ್ ಅನುಮಾನ
ಬೆಂಗಳೂರು : ಆರ್.ಆರ್. ನಗರದಲ್ಲಿ ಅಷ್ಟೊಂದು ಅಂತರದ ಸೋಲು ಸಾಧ್ಯವಿಲ್ಲ. ಇವಿಎಂ ದುರ್ಬಳಿಕೆ ಮಾಡಿಕೊಳ್ಳೋಕೆ ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಇವಿಎಂ ದುರ್ಬಳಕೆ ಆರೋಪ ಕೇಳಿ ಬರ್ತಿದೆ.
ಅಮೆರಿಕಾದಲ್ಲೂ ಬ್ಯಾಲೆಟ್ ಪೇಪರ್ ನಡೆಯುತ್ತೆ. ಇವಿಎಂ ಯಾರು ಮಾಡಿರೋದು, ಮನುಷ್ಯರೇ ಮಾಡಿರುವುದು.
ದುರ್ಬಳಕೆ ಮಾಡಿಕೊಳ್ಳೋಕೆ ಅವಕಾಶವಿದೆ. ಆದ್ರೂ ಚುನಾವಣೆ ಆಯೋಗ ಮೂಕ ಪ್ರೇಕ್ಷಕವಾಗಿದೆ. ಇದೇ ರೀತಿ ಆದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ಆಗಲಿದೆ ಎಂದರು.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪತ್ರಕರ್ತರ ಕತ್ತು ಹಿಸುಕಲಾಗ್ತಿದೆ : ರಾಹುಲ್
ಇನ್ನು ಇವಿಎಂ ರದ್ದು ಮಾಡಿ ಬ್ಯಾಲೆಟ್ ತರಬೇಕು ಎಂದು ಒತ್ತಾಯಿಸಿದ ಸುರೇಶ್, ಎಲ್ಲಾ ಪಕ್ಷಗಳು ಬ್ಯಾಲೇಟ್ ತರುವಂತೆ ಸುಪ್ರೀಂಕೋರ್ಟ್ ಗೆ ಪತ್ರ ಅಭಿಯಾನ ಮಾಡಬೇಕು.
ಆರ್.ಆರ್. ನಗರದಲ್ಲಿ ಅಷ್ಟೊಂದು ಅಂತರದ ಸೋಲು ಸಾಧ್ಯವಿಲ್ಲ. ವೋಟಿಂಗ್ ಪ್ಯಾಟ್ರನ್ ಚೇಂಜ್ ಆಗಿದೆ ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel