ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೊನೆಗೂ ಸರ್ಕಾರಿ ನಿವಾಸ ಪ್ರವೇಶಿಸಿದ್ದಾರೆ.
ಅಧಿಕಾರ ವಹಿಸಿಕೊಂಡ 6 ತಿಂಗಳ ಬಳಿಕ ಕುಮಾರಕೃಪಾ ದಕ್ಷಿಣದಲ್ಲಿನ ನಂಬರ್ 1 ಸರ್ಕಾರಿ ನಿವಾಸ ಪ್ರವೇಶಿಸಿದ್ದಾರೆ. ಬಂಗಲೆ ನವೀಕರಣದ ನಂತರ ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ಅಧಿಕೃತವಾಗಿ ಪ್ರವೇಶಿಸುವ ಮೊದಲೇ ಸರ್ಕಾರಿ ನಿವಾಸದಲ್ಲಿ ಕುಳಿತುಕೊಂಡು ಅಧಿಕಾರಿಗಳು ಹಾಗೂ ಶಾಸಕರ ಜತೆ ಚರ್ಚೆ ನಡೆಸಿದ್ದಾರೆ.
ವಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರಕ್ಕೆ ಪತ್ರ ಬರೆದ ಬೆನ್ನಲ್ಲಿಯೇ ಡಿಕೆಶಿ ಬಂಗಲೆ ಪ್ರವೇಶ ಮಾಡಿರುವುದು ಕೂಡ ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಇದೇ ಕುಮಾರಕೃಪಾ ದಕ್ಷಿಣದಲ್ಲಿನ ನಂಬರ್ 1 ನಿವಾಸದಲ್ಲಿ ವಾಸವಾಗಿದ್ದರು. ಈಗ ಸಿಎಂ ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಿದ್ದರಿಂದಾಗಿ ಈ ಬಂಗಲೆಯನ್ನೇ ಡಿಕೆಶಿ ಕೇಳಿ ಪಡೆದಿದ್ದಾರೆ.
ಈ ನಿವಾಸ ಅದೃಷ್ಟ ಹೊಂದಿದೆ ಎನ್ನಲಾಗಿದ್ದು, ಜ್ಯೋತಿಷಿಗಳ ಸಲಹೆ ಪಡೆದುಕೊಂಡೇ ಇದೇ ನಿವಾಸ ಆಯ್ಕೆ ಮಾಡಿಕೊಂಡಿದ್ದಾರೆ. ಈ ನಿವಾಸ ಬೇಕೆಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸರ್ಕಾರಕ್ಕೆ ಪತ್ರ ಬರೆದಿದ್ದರು.