ಬೆಂಗಳೂರು: ರೇಣುಕಾಸ್ವಾಮಿಯ (Renukaswamy) ಮರ್ಮಾಂಗಕ್ಕೆ ಹೊಡೆದು, ಚಿತ್ರಹಿಂಸೆ ನೀಡಲಾಗಿದೆ ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ತಂಡ ಈಗಾಗಲೇ ಪೊಲೀಸರ ವಶದಲ್ಲಿದ್ದಾರೆ.
ವಿಕ್ಟೋರಿಯಾ ಫಾರೆನ್ಸಿಕ್ ತಜ್ಞರ ಮರಣೋತ್ತರ ಪರೀಕ್ಷೆಯಲ್ಲಿ ರೇಣುಕಾಸ್ವಾಮಿ ಮರ್ಮಾಂಗದ ಮೇಲೆ ಹಲ್ಲೆ ಮಾಡಿರುವುದು ದೃಢಪಟ್ಟಿದೆ. ಮರ್ಮಾಂಗಕ್ಕೆ ಹೊಡೆದಿರುವುದರಿಂದ ರಕ್ತ ಸೋರಿಕೆಯಾಗಿದೆ. ಮರದ ತುಂಡಿನಿಂದ ಹೊಟ್ಟೆಗೆ ಹಲ್ಲೆ ಮಾಡಿದ್ದು, ಹೊಟ್ಟೆ ಭಾಗದಲ್ಲಿ ರಕ್ತ ಚಿಮ್ಮಿದೆ.. ತಲೆಗೆ ಹೊಡೆದಿದ್ದಾರೆ.
ಕೈ ಮತ್ತು ಕಾಲು, ಬೆನ್ನು, ಎದೆ ಭಾಗದಲ್ಲಿ ರಕ್ತ ಕಾಣಿಸಿಕೊಂಡಿದೆ. ಹೀಗಾಗಿ ರೇಣುಕಾಸ್ವಾಮಿ ದೇಹದಲ್ಲಿ ರಕ್ತ ಹೆಪ್ಪುಗಟ್ಟಿದೆ. ದೇಹದ 15 ಭಾಗಗಳಲ್ಲಿ ಗಾಯಗಳಾಗಿವೆ. ಕಟ್ಟಿಗೆ, ಬೆಲ್ಟ್ ನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಮೋರಿಯಲ್ಲಿ ಎಸೆದಿದ್ದರಿಂದಾಗಿ ಮುಖ ಮತ್ತು ದವಡೆಯನ್ನ ನಾಯಿಗಳು ಕಿತ್ತು ತಿಂದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿದೆ.