ಚಂದನವನದ ಖ್ಯಾತ ನಟ ಡಾಲಿ ಧನಂಜಯ್ (Dali Dhananjay) ಮಲೆ ಮಹದೇಶ್ವರ (Malemahadeshwar)ನ ಸನ್ನಿಧಾನಕ್ಕೆ ಬಂದು ದರ್ಶನ ಪಡೆದಿದ್ದಾರೆ.
ಟಗರುಪಲ್ಯ ಬಿಡುಗಡೆಗೂ ಮುನ್ನ ಡಾಲಿ ಧನಂಜಯ ಸ್ನೇಹಿತರೊಂದಿಗೆ ಮಹಾದೇಶ್ವರನ ಆಶೀರ್ವಾದ ಪಡೆದಿದ್ದಾರೆ.
ಡಾಲಿ ಧನಂಜಯ್ ಈಗ ‘ಉತ್ತರಕಾಂಡ’ (Uttarakanda Film) ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ ಶಿವಣ್ಣ ಕೂಡ ಇದ್ದಾರೆ. ಹೀಗಾಗಿ ಸಾಕಷ್ಟು ವಿಚಾರಗಳಿಂದ ಈ ಚಿತ್ರ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. ರತ್ನನ್ ಪ್ರಪಂಚ’ ಖ್ಯಾತಿಯ ನಿರ್ದೇಶಕ ರೋಹಿತ್ ಪದಕಿ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.