ಕರ್ನಾಟಕ ಸರ್ಕಾರವು ನಾಲ್ಕು ಹೊಸ ಸದಸ್ಯರನ್ನು ವಿಧಾನ ಪರಿಷತ್ತಿಗೆ (MLC) ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ. ಈ ಕುರಿತು ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಡಾ. ಆರತಿ ಕೃಷ್ಣ, ರಮೇಶ್ ಬಾಬು, ಹಾಗೂ ಪತ್ರಕರ್ತರಾದ ಎಫ್. ಹೆಚ್. ಜಕ್ಕಪ್ಪನವರ್ ಮತ್ತು ಶಿವಕುಮಾರ್ ಕೆ. ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ನಾಮನಿರ್ದೇಶಿತರ ವಿವರ
* ಡಾ. ಆರತಿ ಕೃಷ್ಣ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದವರಾದ ಇವರು, ಕಾಂಗ್ರೆಸ್ ಹೈಕಮಾಂಡ್ ಕೋಟಾದಿಂದ ಆಯ್ಕೆಯಾಗಿದ್ದಾರೆ.
* ರಮೇಶ್ ಬಾಬು: ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಹಾಗೂ ಕಾಂಗ್ರೆಸ್ ವಕ್ತಾರರಾದ ಇವರು ಮುಖ್ಯಮಂತ್ರಿಗಳ ಕೋಟಾದಿಂದ ನಾಮನಿರ್ದೇಶಿತರಾಗಿದ್ದಾರೆ.
* ಎಫ್. ಹೆಚ್. ಜಕ್ಕಪ್ಪನವರ್: ಹಿರಿಯ ಪತ್ರಕರ್ತರಾದ ಇವರು ಕಾಂಗ್ರೆಸ್ ಹೈಕಮಾಂಡ್ ಕೋಟಾದಿಂದ ಆಯ್ಕೆಯಾಗಿದ್ದು, ದಲಿತ ಬಲಗೈ ಸಮುದಾಯಕ್ಕೆ ಸೇರಿದವರು.
* ಶಿವಕುಮಾರ್ ಕೆ.: ಮೈಸೂರಿನಲ್ಲಿ ಹಿರಿಯ ಇಂಗ್ಲಿಷ್ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ಇವರು ಮುಖ್ಯಮಂತ್ರಿಗಳ ಕೋಟಾದಿಂದ ನಾಮನಿರ್ದೇಶಿತರಾಗಿದ್ದು, ಇವರೂ ಸಹ ದಲಿತ ಬಲಗೈ ಸಮುದಾಯದವರು.
ಈ ನಾಲ್ವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಹೈಕಮಾಂಡ್ ಈ ಹಿಂದೆ ಒಪ್ಪಿಗೆ ನೀಡಿತ್ತು.







