ಭಾರತೀಯ ಕ್ರಿಕೆಟ್ ತಂಡದ ಆಟಗಾರ ಶಿಖರ್ ಧವನ್ (Shikhar Dhawan) ಅವರು ಪತ್ನಿ ಆಯೇಷಾ ಮುಖರ್ಜಿಗೆ (Ayesha Mukherjee) ವಿಚ್ಛೇದನ ನೀಡಿದ್ದಾರೆ.
ದೆಹಲಿಯ ಪಟಿಯಾಲ ಹೌಸ್ ಕೋರ್ಟ್ (ಕೌಟುಂಬಿಕ ನ್ಯಾಯಾಲಯ) ಶಿಖರ್ ಮತ್ತು ಆಯೇಷಾ ವಿಚ್ಛೇದನವನ್ನು (Shikhar Dhawan-Ayesha Mukherjee Divorce) ಮಂಜೂರು ಮಾಡಿದೆ.
ಶಿಖರ್ ಧವನ್ ಹಾಗೂ ಆಯೇಷಾ ಮುಖರ್ಜಿ 2012ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಜೋರಾವರ್ ಎಂಬ ಮಗನಿದ್ದಾನೆ. ಆಯೇಷಾಗೆ ಇದು ಎರಡನೇ ಮದುವೆಯಾಗಿದ್ದು, ಶಿಖರ್ ಗಿಂತ 10 ವರ್ಷ ದೊಡ್ಡವರು. ಗ ಪತ್ನಿ ಪುತ್ರನಿಂದ ಬೇರೆಯಾಗಿ ವರ್ಷಗಟ್ಟಲೆ ಬದುಕುವಂತೆ ಒತ್ತಾಯಿಸಿ ಮಾನಸಿಕ ಹಿಂಸೆ ನೀಡಿದ್ದಾರ ಎಂದು ಶಿಖರ್ ಆರೋಪಿಸಿದ್ದಾರೆ. ಈ ಆರೋಪಗಳನ್ನು ಆಯೇಷಾ ಸಮರ್ಥನೆ ಮಾಡಿಕೊಳ್ಳಲು ವಿಫಲರಾಗಿದ್ದಾರೆ ಎಂದು ಕೋರ್ಟ್ ಹೇಳಿದೆ.
ಮಗನ ಖಾಯಂ ಕಸ್ಟಡಿಗೆ ಸಂಬಂಧಿಸಿದಂತೆ ಕೋರ್ಟ್ ಯಾವುದೇ ಆದೇಶ ನೀಡಿಲ್ಲ. ಆದರೆ ಧವನ್ಗೆ ತನ್ನ ಮಗನನ್ನು ಭೇಟಿ ಮಾಡಲು ಮತ್ತು ವೀಡಿಯೋ ಕರೆ ಮೂಲಕ ಮಾತನಾಡುವ ಹಕ್ಕನ್ನು ಕೋರ್ಟ್ ನೀಡಿದೆ. ಆಯೇಷಾ ಸದ್ಯ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಅವರು ಭಾರತ ಹಾಗೂ ಆಸ್ಟ್ರೇಲಿಯಾ ಪೌರತ್ವ ಹೊಂದಿದ್ದಾರೆ.