ಹೆಣ್ಣುಮಕ್ಕಳಿಗೆ ತವರಿನ ಆಸ್ತಿಯಲ್ಲಿ ಸಮಾನ ಹಕ್ಕು ಇದೆ. ಆದರೆ ಅಳಿಯನ (ಮಗಳ ಗಂಡನ) ವಿಷಯದಲ್ಲಿ, ಮಾವನ ಆಸ್ತಿಯಲ್ಲಿ ಪಾಲು ಇದೆಯಾ ಎಂಬ ಪ್ರಶ್ನೆಗಳು ಹಲವರಿಗೆ ಇದೆ..
2005ರ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಹೆಣ್ಣುಮಕ್ಕಳಿಗೆ ತವರಿನ ಕುಟುಂಬದ ಆಸ್ತಿಯಲ್ಲಿ ಸಮಾನ ಹಕ್ಕು ಇದೆ. ಆದರೆ ಮಾವನ ಆಸ್ತಿಯಲ್ಲಿ ಅಳಿಯನಿಗೆ ಹಕ್ಕು ಇಲ್ಲ. ಹೈಕೋರ್ಟ್ ಈ ವಿಷಯದಲ್ಲಿ ಈಗಾಗಲೇ ತೀರ್ಪು ನೀಡಿದ್ದು, ಮಾವನ ಆಸ್ತಿಯಲ್ಲಿ ಅಳಿಯನಿಗೆ ಹಕ್ಕು ಇಲ್ಲ ಎಂದು ಸ್ಪಷ್ಟಪಡಿಸಿವೆ. ಆಸ್ತಿ ಹಕ್ಕುಗಳು ಕೇವಲ ಮಗಳಿಗೆ ಮಾತ್ರ ಇರುತ್ತವೆ, ಅದು ಕುಟುಂಬದ ನಿಯಮಗಳು ಮತ್ತು ಕಾನೂನು ಪ್ರಕ್ರಿಯೆಯ ಪ್ರಕಾರ ನಿರ್ಧರಿಸಲಾಗುತ್ತದೆ.
ಇದೀಗ ಮಧ್ಯಪ್ರದೇಶದ ಹೈಕೋರ್ಟ್ ನೀಡಿದ ಮಹತ್ವದ ತೀರ್ಪಿನಲ್ಲಿ ಮಾವನ ಆಸ್ತಿಯಲ್ಲಿ ಅಳಿಯನಿಗೆ ಹಕ್ಕು ಇಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಈ ಪ್ರಕರಣದಲ್ಲಿ ಭೋಪಾಲ್ ನಿವಾಸಿ ದಿಲೀಪ್ ಮರ್ಮತ್ ಎಂಬಾತ ಜ್ಯೋತಿ ಅವರ ಪತಿಯಾಗಿ ತನ್ನ ಮಾವನ ಮನೆಯಲ್ಲಿ ವಾಸವಾಗಿದ್ದ. ಮಾವ ತಮ್ಮ ಮಗಳು ಜ್ಯೋತಿ ಮತ್ತು ಅಳಿಯ ದಿಲೀಪ್ ಮರ್ಮತ್ ಅವರಿಗೆ ತಮ್ಮ ಮನೆಯಲ್ಲಿ ವಾಸಿಸಲು ಅನುಮತಿ ನೀಡಿದ್ದರು. ಅದಕ್ಕೆ ಪ್ರತಿಯಾಗಿ, ಅವರು ವೃದ್ಧಾಪ್ಯದಲ್ಲಿ ತಮ್ಮ ಮಾವನನ್ನು ನೋಡಿಕೊಳ್ಳಲು ಒಪ್ಪಿಕೊಂಡಿದ್ದರು. ನಂತರ, ಅವರ ಮಗಳು ಜ್ಯೋತಿ 2018 ರಲ್ಲಿ ಅಪಘಾತದಲ್ಲಿ ನಿಧನರಾದರು. ಮಗಳ ಮರಣದ ನಂತರ, ಅಳಿಯ ದಿಲೀಪ್ ಮರ್ಮತ್ ಮತ್ತೆ ವಿವಾಹವಾದ.
ಆದರೆ, ಎರಡನೇ ಮದುವೆ ಮಾಡಿದ ನಂತರ, ಅವನು ವೃದ್ಧ ಮಾವನನ್ನು ನೋಡಿಕೊಳ್ಳುವುದನ್ನು ನಿಲ್ಲಿಸಿದ. ಈ ಹಿನ್ನೆಲೆಯಲ್ಲಿ, ಮಾವ ನಾರಾಯಣ್ ವರ್ಮಾ ಅವರು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007 ಅಡಿಯಲ್ಲಿ ಅಳಿಯನ ವಿರುದ್ಧ ಕಾನೂನಿನ ಮೊರೆಹೋದರು.
ಹೈಕೋರ್ಟ್ ತೀರ್ಪಿನ ಪ್ರಮುಖ ಅಂಶಗಳು:
1. ಅಳಿಯನಿಗೆ ಮಾವನ ಆಸ್ತಿಯಲ್ಲಿ ಹಕ್ಕು ಇಲ್ಲ: ಮಾವನ ಆಸ್ತಿಯಲ್ಲಿ ಆಳಿಯ ಅಥವಾ ಮನೆ ಅಳಿಯನಿಗೆ ಹಕ್ಕು ಇಲ್ಲ.
2. ಮನೆ ಖಾಲಿ ಮಾಡಬೇಕು: ಕೋರ್ಟ್ ಅಳಿಯನಿಗೆ 30 ದಿನಗಳ ಅವಧಿಯಲ್ಲಿ ಮಾವನ ಮನೆಯನ್ನು ಖಾಲಿ ಮಾಡುವಂತೆ ಆದೇಶ ನೀಡಿದೆ.
3. ಪೋಷಕರ ನಿರ್ವಹಣೆ ಕಾಯ್ದೆ: ಮಾವನ ಅನಾರೋಗ್ಯ ಪೀಡಿತ ಪತ್ನಿ ಮತ್ತು ತನ್ನ ಪಿಂಚಣಿಯೊಂದೇ ಅವಲಂಬಿಸಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮಾವನಿಗೆ ತಮ್ಮ ಮನೆಯ ಹಕ್ಕು ಕಾಯ್ದಿರಿಸಲು ಆದೇಶ ನೀಡಲಾಗಿದೆ.
4. ಅಳಿಯನ ವಾದ ತಿರಸ್ಕೃತ: ದಿಲೀಪ್ ಮರ್ಮತ್ ತಾವು ಮನೆಯ ನಿರ್ಮಾಣಕ್ಕೆ ₹10 ಲಕ್ಷ ರೂಪಾಯಿ ಸಹಾಯ ಮಾಡಿದ್ಧೇನೆ ಎಂದು ವಾದಿಸಿದರೂ, ಕೋರ್ಟ್ ಈ ವಾದವನ್ನು ತಿರಸ್ಕರಿಸಿದೆ.