ಅಮೆರಿಕದ ನಾಯಿಯೊಂದು ಅತಿ ಹೆಚ್ಚು ಉದ್ದದ ನಾಲಿಗೆ ಹೊಂದಿದ್ದು, ಗಿನ್ನೆಸ್ ದಾಖಲೆ ಮಾಡಿದೆ. 12.7 ಸೆ.ಮೀ ಅಂದರೆ ಬರೋಬ್ಬರಿ 5 ಇಂಚು ಉದ್ದದ ನಾಲಿಗೆ ಹೊಂದಿರುವ ಝೋಯ್ ಹೆಸರಿನ ನಾಯಿಯೇ ಈ ದಾಖಲೆ ಮಾಡಿದೆ.
ಲ್ಯಾಬ್ರಡಾರ್, ಜರ್ಮನ್ ಶೆಫರ್ಡ್ ಮಿಶ್ರ ತಳಿಯಾದ ನಾಯಿಯ ನಾಲಿಗೆಯೂ ಆರಂಭದಲ್ಲಿಯೇ ಅತೀ ಉದ್ದ ಇರುವುದನ್ನು ಮಾಲೀಕರು ಗಮನಿಸಿದ್ದರು. ಲೂಸಿಯಾನಾದಲ್ಲಿನ ಈ ನಾಯಿಯ ನಾಲಿಗೆ ಸೋಡಾ ಕ್ಯಾನ್ ಗಿಂತಲೂ ಉದ್ದವಾಗಿದೆ.
ಈ ನಾಯಿಗೆ ಹೊರಾಂಗಣದಲ್ಲಿ ಸುತ್ತಾಡುವುದು, ಚೆಂಡುಗಳನ್ನು ತುರುವುದು, ಅಳಿಲುಗಳನ್ನು ಬೆನ್ನಟ್ಟುವುದು, ಕಾರು ಸವಾರಿ ತುಂಬಾ ಇಷ್ಟವಂತೆ. ಆದರೆ, ಇದಕ್ಕೆ ಸ್ನಾನ ಅಂದರೆ ಆಗುವುದಿಲ್ಲವಂತೆ. 9.49 ಸ.ಮೀ ಅಂದರೆ 3.74 ಇಂಚು ಉದ್ದ ನಾಲಿಗೆ ಹೊಂದಿರುವ ಬಿಸ್ಬೀ ಎಂಬ ನಾಯಿಯ ದಾಖಲೆಯನ್ನು ಇದು ಈಗ ಮುರಿದಿದೆ.