ಹೆಡ್ – ಬುಶ್ ಗೆ ಡಾಲಿ ನಿರ್ಮಾಪಕ – ಈ ನಿರ್ಧಾರಕ್ಕೆ ನಿಜವಾದ ಕಾರಣವೇನು..?
ಟಾಲಿವುಡ್ , ಸ್ಯಾಂಡಲ್ ವುಡ್ ನಲ್ಲಿ ವಿಲ್ಲನ್ , ಆಗಿ ಹೀರೋ ಆಗಿ ಮಿಂಚು ಹರಿಸುತ್ತಿರುವ ಡಾಲಿ ಧನಂಜಯ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಚಂದನವನದ ಬ್ಯುಸಿಯೆಸ್ಟ್ ನಟರ ಪೈಕಿ ಒಬ್ರು.. ನಟನೆ ಅಷ್ಟೇ ಅಲ್ಲದೇ ನಿರ್ಮಾಪಕರಾಗಿಯೂ ಡಾಲಿ ಈಗಾಗಲೇ ಗುರುತಿಸಿಕೊಂಡಿದ್ದು, ನಿರ್ಮಾಣ ಸಂಸ್ಥೆಯನ್ನೂ ತೆರೆದಿದ್ದಾರೆ ಜೊತೆಗೆ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾ ‘ಬಡವ ರಾಸ್ಕಲ್’. ಈ ಸಿನಿಮಾಗೆ ಡಾಲಿಯೇ ನಾಯಕ..
ಈಗ ವಿಷ್ಯ ಏನೆಂದ್ರೆ ಡಾಲಿ ಮತ್ತೊಂದು ಸಿನಿಮಾ ನಿರ್ಮಾಣ ಮಾಡ್ತಾಯಿದ್ದಾರೆ.. ಆದ್ರೆ ಪೂರ್ಣ ಪ್ರಮಾಣದಲ್ಲಿ ಅಲ್ಲ ಬದಲಾಗಿ ಜಂಟಿಯಾಗಿ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ್ದಾರೆ.. ಅವರ ನಿರ್ಮಾಣ.. ಅವರೇ ನಾಯಕರಾಗಿರುವ ಸಿನಿಮಾ ಮತ್ಯಾವುದೂ ಅಲ್ಲ ಹೆಡ್ ಬುಶ್.. ಈ ಸಿನಿಮಾ ಸಾಕಷ್ಟು ಸೌಂಡ್ ಮಾಡಿರುವ , ಮಾಡ್ತಾಇರುವ ಸಿನಿಮಾಗಳ ಪೈಕಿ ಒಂದು.. ಕೇವಲ ಪೋಸ್ಟರ್ ನೋಡಿಯೇ ಅಅಭಿಮಾನಿಗಳು ಡಾಲಿ ಲುಕ್ ಗೆ ಫಿದಾ ಆಗಿದ್ರು.. ಈ ಸಿನಿಮಾ ಇನ್ನೂವರೆಗೂ ಸೆಟ್ಟೇರಿಲ್ಲ.. ಇದೇ ಸಿನಿಮಾಗೆ ಡಾಲಿ ಬಂಡವಾಳ ಹೂಡಲು ಮುಂದಾಗಿದ್ದಾರೆ ಎನ್ನಲಾಗ್ತಾಯಿದೆ..
ಹೆಡ್-ಬುಶ್ ಸಿನಿಮಾವು ಸಿನಿಮಾವು ಕಳೆದ ವರ್ಷದ ಲಾಕ್ಡೌನ್ಗೆ ಮುಂಚೆಯೇ ಘೋಷಣೆ ಆಗಿತ್ತು. ಆದರೆ ಸಿನಿಮಾ ಇನ್ನೂ ಸೆಟ್ಟೇರಿಲ್ಲ. ಇದೀಗ ಈ ಸಿನಿಮಾದ ನಿರ್ಮಾಣದ ಜವಾಬ್ದಾರಿಯನ್ನು ಡಾಲಿ ಧನಂಜಯ್ ವಹಿಸಿಕೊಂಡಿದ್ದು ಸಿನಿಮಾ ಶೀಘ್ರದಲ್ಲಿಯೇ ಸೆಟ್ಟೇರಲಿದೆ.
‘ಹೆಡ್-ಬುಶ್’ ಸಿನಿಮಾವು ಕುಖ್ಯಾತ ರೌಡಿ ಎಂಪಿ ಜಯರಾಜ್ ಜೀವನ ಆಧರಿಸಿದ್ದಾಗಿದ್ದು, ಸಿನಿಮಾಕ್ಕೆ ಅಗ್ನಿ ಶ್ರೀಧರ್ ಕತೆ ಬರೆದಿದ್ದಾರೆ. ಸಿನಿಮಾಕ್ಕಾಗಿ ಧನಂಜಯ್ ಕಸರತ್ತು ಮಾಡಿ ದೇಹಾಕಾರ ಬದಲಾಯಿಸಿಕೊಂಡಿದ್ದಾರೆ. ಸಿನಿಮಾದ ಚಿತ್ರೀಕರಣವು ಆಗಸ್ಟ್ 9ರಿಂದ ಆರಂಭವಾಗಲಿದ್ದು 23ಕ್ಕೆ ಮೊದಲ ಲುಕ್ ಬಿಡುಗಡೆ ಆಗಲಿದೆ.
ಇನ್ನೂ ಧನಂಜಯ್ ಅವರೇ ಬಯಸಿ ನಿರ್ಮಾಣದ ಜವಾಬ್ದಾರಿ ಹೊತ್ತಿಲ್ಲ..
ಬದಲಾಗಿ ಅನಿವಾರ್ಯತೆಯಿಂದ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎನ್ನಲಾಗ್ತಿದೆ.. ಹೌದು.. ಈ ಹಿಂದೆ ಘೋಷಣೆಯಾಗಿದ್ದ ಸಿನಿಮಾದ ನಿರ್ಮಾಪಕರು ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.. ಇದೇ ಕಾರಣಕ್ಕೆ ಡಾಲಿ ಪಾಲುದಾರ ನಿರ್ಮಾಕರ ಜೊತೆಗೆ ಕೈ ಜೋಡಿಸಿದ್ದಾರೆ ಎನ್ನುತ್ತಿವೆ ಮೂಲಗಳು.
ಇನ್ನೂ ಡಾಲಿ ಅಭಿನಯದ 3 ಸಿನಿಮಾಗಳು ತೆರೆಕಾಣುವುದು ಬಾಕಿ ಇದೆ.. ರತ್ನನ್ ಪರ್ಪಂಚ, ಸಲಗ , ತೋತಾಪುರಿ ಸಿನಿಮಾಗಳು ಬಿಡುಗಡೆ ರೆಡಿಯಾಗಿದೆ.
ಅಲ್ಲದೇ ಡಾಲಿ, ಅವರದ್ದೇ ನಿರ್ಮಾಣ ಮತ್ತು ನಟನೆಯ ಬಡವ ರ್ಯಾಸ್ಕಲ್, ಮಾನ್ಸೂನ್ ರಾಗ, ಭೈರಾಗಿ, ತೆಲುಗಿನ ಪುಷ್ಪ, ತಮಿಳಿನ ಪಾಯುಂ ಒಲಿ ನೀ ಎನಕ್ಕುಂ ಸಿನಿಮಾಗಳ ಚಿತ್ರೀಕರಣವೂ ಜಾರಿಯಲ್ಲಿದೆ.