ದೇಶದಲ್ಲಿ ಕೊರೊನಾ ತಾಂಡವಾಡುತ್ತಿದ್ದ ಸಂದರ್ಭದಲ್ಲಿ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಯುವತಿಯೊಬ್ಬಳು ಡೋಲೋ 650 ಮಾತ್ರೆ ಹಾಗೂ ರಾಗಿ ಮುದ್ದೆ ಮಾತ್ರ ಅದಕ್ಕೆ ಮದ್ದು ಎಂದು ಹೇಳಿದ್ದರು. ಈಗ ಈ ಯುವತಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ.
ಶಶಿರೇಖಾ ಎಂಬ ಯುವತಿಯೇ ಈ ರೀಲ್ಸ್ ನ ನಾಯಕಿಯಾಗಿದ್ದರು. ಡೋಲೋ 650 ಮಾತ್ರೆ, ಬಿಸಿ ಬಿಸಿ ರಾಗಿ ಮುದ್ದೆ ಎನ್ನುವ ಡೈಲಾಗ್ ಹೇಳುವ ಮೂಲಕ ಫೇಮಸ್ ಆಗಿದ್ದರು. ಈಗ ಶಶಿರೇಖಾ (Shashirekha) ಅವರೇ ಇಂದು ನಾಯಕಿಯಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಸೌಜನ್ಯ (Soujanya)ಹೆಸರಿನಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಇವರೇ ನಾಯಕಿ ಎನ್ನಲಾಗಿದೆ.
ಈಗಷ್ಟೇ ಮೈಸೂರಿನಲ್ಲಿ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಲಾಗಿದೆ. ಸೌಜನ್ಯ ಹೆಸರಾಗಿದ್ದರೆ ಇದು ಆರಂಭ ಮಾತ್ರ ಅಂತ್ಯವಲ್ಲ ಎನ್ನುವ ಶೀರ್ಷಿಕೆ ಕೂಡ ಚಿತ್ರಕ್ಕೆ ಇದೆ. ಚೇತನ್ ದೇವರಾಜ್ ನಿರ್ದೇಶನ ಮಾಡುತ್ತಿದ್ದು, ದೋಸ್ತಿ ಕ್ರಿಯೇಷನ್ಸ್ ಚಿತ್ರ ನಿರ್ಮಾಣ ಮಾಡುತ್ತಿದೆ.ಇದು ಮಹಿಳಾ ದೌರ್ಜನ್ಯದ ವಿರೋಧದ ಚಿತ್ರ ಎನ್ನಲಾಗುತ್ತಿದೆ.