12 K M ಉದ್ದದ ರಸ್ತೆಗೆ ನಟ ಡಾ. ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ….
ನಾಯಂಡಹಳ್ಳಿ ಜಂಕ್ಷನ್ ನಿಂದ ವೆಗಾ ಸಿಟಿ ಮಾಲ್ ಜಂಕ್ಷನ್ ವರೆಗಿನ ರಸ್ತೆಗೆ ನಟ ಡಾ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನ ನಾಮಕರಣ ಮಾಡಲಾಗಿದ್ದು, ಶೀಘ್ರದಲ್ಲಿಯೇ ಪುನೀತ್ ರಾಜ್ ಕುಮಾರ್ ರಸ್ತೆ ಉದ್ಘಾಟನೆಗೆ ಸಿದ್ಧವಾಗಿದೆ.
ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದ್ಧಿಗೋಷ್ಠಿ ಆಯೋಜಿಸಲಾಗಿತ್ತು. ಸಚಿವ ಆರ್ ಅಶೋಕ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆದಿದ್ದು ಪುನೀತ್ ರಾಜ್ ಕುಮಾರ್ ರಸ್ತೆ ಉದ್ಘಾಟನೆ ದಿನಾಂಕ ಬಹಿರಂಗ ಪಡಿಸಿದ್ದಾರೆ.
ಸುಮಾರು 12 ಕಿಲೋಮೀಟರ್ ಉದ್ದ ಇರುವ ಈ ರಸ್ತೆಗೆ ಅಪ್ಪು ಹೆಸರಿಡಲಾಗಿದೆ. ಇಷ್ಟು ಉದ್ದದ ರಸ್ತೆಗೆ ಇದುವರೆಗೂ ಯಾರ ಹೆಸರು ಇಟ್ಟಿಲ್ಲ ಇದೀಗ ಮೊದಲ ಬಾರಿಗೆ ಅಪ್ಪು ಹೆಸರಿಡಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಬಹಿರಂಗ ಪಡಿಸಿದ್ದಾರೆ.
ಫೆಬ್ರವರಿ 7 ರಂದು ಅಂದರೆ ನಾಳೆ ಸಂಜೆ 6 ಗಂಟೆಗೆ ‘ಪದ್ಮನಾಭನ ನಗರದ ಅಟಲ್ ಬಿಹಾರ್ ವಾಜಪೇಯಿ ಕ್ರಿಡಾಂಗಣದಲ್ಲಿ ಕಾರ್ಯಕ್ರಮದಲ್ಲಿ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ಸಚಿವರು, ಇಡೀ ಚಿತ್ರರಂಗ ಕಾರ್ಯಕ್ರಮದಲ್ಲಿ ಭಾಗವಹಿಸ್ತಾರೆ. ಈ ಕಾರ್ಯಕ್ರಮಕ್ಕೆ ಎಲ್ಲಾ ಅಭಿಮಾನಿಗಳಿಗೆ ಅವಕಾಶ ಇದೆ’ ಎಂದು ಆಶೋಕ್ ಹೇಳಿದ್ದಾರೆ.
Dr puneeth rajkumar road : 12 K M long road to actor Dr. Puneet Raj Kumar Name Nomination….