ಕಟಾಲಿನ್ ಕರಿಕೊ ಹಾಗೂ ಡ್ರೂ ವೈಸ್‌ಮನ್ ಅವರಿಗೆ ಜಂಟಿಯಾಗಿ ಶರೀರಶಾಸ್ತ್ರ ಅಥವಾ ವೈದ್ಯಕೀಯ (Physiology or Medicine) ನೊಬೆಲ್ ಪ್ರಶಸ್ತಿ ವಿತರಿಸಲಾಗಿದೆ.
ಇಂದು ಈ ಇಬ್ಬರೂ ದಿಗ್ಗಜರಿಗೆ ನ್ಯೂಕ್ಲಿಯೊಸೈಡ್ ಬೇಸ್ ಮಾರ್ಪಾಡುಗಳಿಗೆ ಸಂಬಂಧಿಸಿದ ಅವರ ಸಂಶೋಧನೆಗಳಿಗಾಗಿ ಈ ಗೌರವ ಅರ್ಪಿಸಲಾಗಿದೆ. ಅವರಿಬ್ಬರ ಈ ಆವಿಷ್ಕಾರವು ಕರೋನವೈರಸ್ ವಿರುದ್ಧ ಪರಿಣಾಮಕಾರಿ ಲಸಿಕೆಗಳನ್ನು ತಯಾರಿಸಲು ಸಾಕಷ್ಟು ಸಹಕಾರಿಯಾಗಿತ್ತು. ನೊಬೆಲ್ ಸಮಿತಿಯ ಕಾರ್ಯದರ್ಶಿಯಾಗಿರುವ ಥಾಮಸ್ ಪರ್ಲ್‌ಮನ್ ಕೊರೊಲಿನ್ಸ್ಕಾ ಅವರು ಈ ಪ್ರಶಸ್ತಿ ವಿತರಿಸಿದರು.