ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ತಾಯಿ ನಿಧನ
ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ಅವರು ಇಂದು ವಿಧಿವಶರಾಗಿದ್ದಾರೆ. ಕಳೆದ 2-3 ವಾರಗಳಿಂದಲೂ ದಿನಗಳಿಂದಲೂ ಅನಾರೋಗ್ಯಕ್ಕೀಡಾಗಿದ್ದ ನಾರಾಯಣಮ್ಮ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆಯ ವ್ಯವಸ್ಥೆ ಮಾಡಿಸಿದ್ದರು ವಿಜಯ್.. ವಿಜಯ್ ಅವರ ತಾಯಿಗೆ ಬ್ರೇನ್ ಸ್ಟ್ರೋಕ್ ಆಗಿತ್ತು.
ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ನಂತರ ಮನೆಗೆ ಕರೆತರಲಾಗಿತ್ತು, ಪ್ರತಿನಿತ್ಯ ವೈದ್ಯರು ಮನೆಗೆ ಬಂದು ಚಿಕಿತ್ಸೆ ನೀಡುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಇಂದು ಅವರು ಕೊನೆ ಉಸಿರೆಳೆದಿದ್ದಾರೆ. ತಾಯಿಯ ಅಂತ್ಯಕ್ರಿಯೆಯನ್ನು ಆನೇಕಲ್ ಕುಂಬಾರ ಹಳ್ಳಿಯಲ್ಲಿ ನಾಳೆ ರಂದು ಮಾಡಲು ದುನಿಯಾ ವಿಜಯ್ ನಿಶ್ಚಯಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ತಾಯಿಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದ ವಿಜಯ್ ಅವರು ‘ಅಮ್ಮ ಚೇತರಿಸಿಕೊಳ್ಳುತ್ತಿದ್ದಾರೆ. ಅಮ್ಮನಿಗೆ ಆಸ್ಪತ್ರೆಯಲ್ಲಿರಲು ಇಷ್ಟವಾಗಲಿಲ್ಲ, ಅವರ ಒತ್ತಾಯದ ಮೇರೆಗೆ ಅವರನ್ನು ಮನೆಗೆ ಕರೆತಂದು ಇಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿದ್ದೇನೆ. ಅಮ್ಮ ಚೇತರಿಸಿಕೊಳ್ಳಲಿದ್ದಾರೆ’ ಎಂದಿದ್ದರು.