ಚೊಚ್ಚಲ ನಿದೇರ್ಶನದಲ್ಲೇ ದುನಿಯಾ ವಿಜಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಸಲಗ ಚಿತ್ರವನ್ನು ನಿದೇರ್ಶನ ಮಾಡಿಕೊಂಡು, ನಟಿಸಿರುವ ದುನಿಯಾ ವಿಜಿ ಹಸಖ್ಮುಖಿಯಾಗಿದ್ದಾರೆ.
ಕೆ.ಪಿ. ಶ್ರೀಕಾಂತ್ ನಿರ್ಮಾಣ ಮಾಡಿರುವ ಸಲಗ ಚಿತ್ರ ನಿರೀಕ್ಷೆಯಂತೆ ಮಾಸ್ ಆಡಿಯನ್ಸ್ ಗೆ ಇಷ್ಟವಾಗಿದೆ. ರೌಡಿಸಂ ಸೂತ್ರವನ್ನಿಟ್ಟುಕೊಂಡು ನಿರ್ದೇಶನ ಮಾಡಿರುವ ದುನಿಯಾ ವಿಜಿ ಸಾಕಷ್ಟು ಹೋಮ್ ವರ್ಕ್ ಕೂಡ ಮಾಡಿದ್ದಾರೆ.
ಮಾಸ್ತಿ ಚಿತ್ರದ ನೋವು, ಇಹಲೋಕ ತ್ಯಜಿಸಿದ್ದ ಅಮ್ಮನ ನೆನಪು, ಜೊತೆಗೆ ವಿವಾದಗಳು ಹೀಗೆ ದುನಿಯಾ ವಿಜಿ ಅವರನ್ನು ಕಾಡಿದ್ದ ಕಹಿ ನೆನಪುಗಳ ಒಂದೆರಡಲ್ಲ.
ಇನ್ನೇನೂ ದುನಿಯಾ ವಿಜಿ ಕಥೆ ಮುಗಿಯ್ತು ಅಂದುಕೊಂಡವರಿಗೆ ಸಲಗ ಚಿತ್ರದ ಮೂಲಕ ಉತ್ತರ ನೀಡಿದ್ದಾರೆ.
ಕಷ್ಟದ ದಿನಗಳಲ್ಲಿ ಗೆಳೆಯರು ಕೈಕೊಟ್ಟಿದ್ದರು. ಯಾರು ನಂಬುವ ಸ್ಥಿತಿಯಲ್ಲಿರಲಿಲ್ಲ. ದಿನ ನಿತ್ಯದ ಖರ್ಚಿಗೂ ಒದ್ದಾಟ ನಡೆಸಬೇಕಾದ ಪರಿಸ್ಥಿತಿ ದುನಿಯಾ ವಿಜಿಗಿತ್ತು. ಅಂತಹ ಸ್ಥಿತಿಯಲ್ಲೂ ವಿಜಿ ಎದೆಗುಂದಲಿಲ್ಲ. ಧೈರ್ಯ ಕಳೆದುಕೊಳ್ಳಲಿಲ್ಲ. ಸಿನಿಮಾವನ್ನೇ ನಂಬಿರುವ ದುನಿಯಾ ವಿಜಿಗೆ ಮತ್ತೆ ಕೈಹಿಡಿದಿದ್ದು ಸಿನಿಮಾನೇ.
ಹೌದು, ಸಲಗ ಚಿತ್ರದ ಕಥೆಯಿಂದ ಹಿಡಿದು, ಕಲಾವಿದರ ಆಯ್ಕೆ ತನಕ ಪ್ರತಿಯೊಂದನ್ನು ದುನಿಯಾ ವಿಜಿ ಲೆಕ್ಕಚಾರ ಮತ್ತು ಪ್ಲಾನ್ ಮಾಡಿಕೊಂಡು ತೆರೆಮೇಲೆ ತಂದಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿರುತ್ತಿದ್ರೆ ದುನಿಯಾ ವಿಜಿ ಕುಸ್ತಿ ಚಿತ್ರದಲ್ಲಿ ನಟಿಸಬೇಕಿತ್ತು. ಆದ್ರೆ ಆಗ ದುನಿಯಾ ವಿಜಿ ಮೇಲೆ ನಿರ್ಮಾಪಕರಿಗೆ ನಂಬಿಕೆ ಇರಲ್ಲಿಲ್ಲ. ಬೀದಿಗೆ ಬಂದಿದ್ದ ದುನಿಯಾ ವಿಜಿಗೆ ಮಾರ್ಕೆಟ್ ಇಲ್ಲ ಅಂದವರಿಗೆ ಈಗ ಉತ್ತರ ಕೊಟ್ಟಿದ್ದಾರೆ.
ಅಷ್ಟಕ್ಕೂ ದುನಿಯಾ ವಿಜಿ ಅವರ ಸಿನಿಮಾಗೆ ಬಂಡವಾಳ ಹಾಕಿದ್ದು ಕೆ.ಪಿ. ಶ್ರೀಕಾಂತ್. ತಾನು ನಂಬಿರುವ ಗುರುಗಳ ಮಗನ ಹೆಸರು ಕೂಡ ಶ್ರೀಕಾಂತ್ ಅಂತೆ. ಹೀಗಾಗಿ ಪಾತಾಳಕ್ಕೆ ಕುಸಿದ್ದಿದ್ದ ದುನಿಯಾ ವಿಜಿಗೆ ಮರು ಜನ್ಮ ನೀಡಿದ್ದು ಸಲಗ ಚಿತ್ರ.
ಇನ್ನು ದುನಿಯಾ ವಿಜಿ ಕಳೆದ ಕೆಲವೊಂದು ವರ್ಷಗಳಿಂದ ಭಾರೀ ಖಿನ್ನೆಗೂ ಒಳಗಾಗಿದ್ದರು. ಈ ಎಲ್ಲಾ ಒತ್ತಡಗಳಿಂದ ಹೊರಬಂದಿರುವ ದುನಿಯಾ ವಿಜಿ ಇದೀಗ ಫಿನಿಕ್ಸ್ ಹಕ್ಕಿಯಂತೆ ಮೇಲೆದ್ದು ಬಂದಿದ್ದಾರೆ.
ಒಟ್ಟಿನಲ್ಲಿ ಸಲಗ ಚಿತ್ರದ ಮೂಲಕ ದುನಿಯಾ ವಿಜಿ ಅವರು ಸ್ಯಾಂಡಲ್ ವುಡ್ ನಲ್ಲಿ ತನ್ನ ಚಾರ್ಮ್ ಅನ್ನು ಉಳಿಸಿಕೊಂಡಿದ್ದಾರೆ. ಮತ್ತೆ ಹೊಸ ಹುರುಪಿನಿಂದ ಸಿನಿಮಾಗಳನ್ನು ಮಾಡಲು ರೆಡಿಯಾಗಿದ್ದಾರೆ.
ಒಂದೇ ಮಾತಿನಲ್ಲಿ ಹೇಳಬೇಕು ಅಂದ್ರೆ ಸಕ್ಸಸ್ ಅಂದ್ರೆ ಯಶಸ್ಸು ಸಿಗಬೇಕಾದ್ರೆ ಸಾಕಷ್ಟು ನೋವು, ಅವಮಾನ, ಸೋಲುಗಳನ್ನು ಕಾಣಬೇಕು. ಆಗಲೇ ಯಶ ಸಾಧಿಸಲು ಸಾಧ್ಯ. ಇದು ಈಗ ದುನಿಯಾ ವಿಜಿಗೆ ಚೆನ್ನಾಗಿ ಅರ್ಥವಾಗಿರಬೇಕು.
ಒಟಿಟಿಯಲ್ಲಿ ಮ್ಯಾಕ್ಸಿಮ್ ಎಂಟರ್ ಟೈನ್ಮೆಂಟ್ ಗೆ ರೆಡಿ ‘MAX’..ಎಲ್ಲಿ ಯಾವಾಗ ಸ್ಟ್ರೀಮಿಂಗ್ ಆಗಲಿದೆ ಕಿಚ್ಚನ ಸಿನಿಮಾ?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬ್ಲಾಕ್ ಬಸ್ಟರ್ ಮ್ಯಾಕ್ಸ್ ಸಿನಿಮಾ ಒಟಿಟಿ ಎಂಟ್ರಿಗೆ ದಿನಾಂಕ ನಿಗದಿಯಾಗಿದೆ. ಬರೀ ಒಟಿಟಿ ಮಾತ್ರವಲ್ಲ ಟಿವಿಯಲ್ಲಿಯೂ ಬರ್ತಿದೆ ಮ್ಯಾಕ್ಸ್. ತಮಿಳಿನ...