Friday, March 24, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ದುಂಬಿಯಂತೆ ಬಂದು ಅಸುರನನ್ನು ಸಂಹರಿಸಿದ ದುರ್ಗೆಯ ಸನ್ನಿಧಿಯೇ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ..

Naveen Kumar B C by Naveen Kumar B C
March 24, 2022
in Astrology, Newsbeat, ಜ್ಯೋತಿಷ್ಯ
Share on FacebookShare on TwitterShare on WhatsappShare on Telegram

ದುಂಬಿಯಂತೆ ಬಂದು ಅಸುರನನ್ನು ಸಂಹರಿಸಿದ ದುರ್ಗೆಯ ಸನ್ನಿಧಿಯೇ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ..

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಕಟೀಲು ದೇವಸ್ಥಾನಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ದಿನಿತ್ಯ ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡಿ ತಾಯಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಾರೆ. ನಂದಿನಿ ನದಿಯ ಮಧ್ಯಭಾಗದಲ್ಲಿ ಈ ದೇವಾಲಯವಿದೆ.

Related posts

Astrology : ಗುಣಪಡಿಸುವ ಮಂತ್ರಗಳು! ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅಥವಾ ಬೆಳಕಿನ ರೂಪದಲ್ಲಿ ಕೇಳಿದರೆ ಬಾರದ ಯಾವುದೇ ಕಾಯಿಲೆ ದೂರವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?

Astrology : ಗುಣಪಡಿಸುವ ಮಂತ್ರಗಳು! ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅಥವಾ ಬೆಳಕಿನ ರೂಪದಲ್ಲಿ ಕೇಳಿದರೆ ಬಾರದ ಯಾವುದೇ ಕಾಯಿಲೆ ದೂರವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?

March 23, 2023
IPL 2023 Toss

IPL 2023 : ಟಾಸ್ ನಂತರ ಪ್ಲೇಯಿಂಗ್ 11 ಆಯ್ಕೆ ಮಾಡಲು ಅವಕಾಶ; ಬದಲಾಗಲಿವೆ ಹಲವು ನಿಯಮಗಳು…. 

March 23, 2023

ಪೌರಾಣಿಕ ಕಥೆ
ಲೋಕಕಂಟಕರಾಗಿ ಮೆರೆಯುತ್ತಿದ್ದ ಶುಂಭಾನಿಶಂಭರನ್ನು ದೇವಿ ಸಂಹರಿಸಿದ್ದಳು.
ಶುಂಭಾನಿಶಂಭರ ಮಂತ್ರಿಯಾಗಿದ್ದ ಅರುಣಾಸುರನು ರಾಕ್ಷಸರ ನಾಯಕನಾಗಿ ಋಷಿಮುನಿಗಳ ತಪಸ್ಸನ್ನು ಭಂಗ ಪಡಿಸಲಾರಂಭಿಸಿದ. ಭೂ ಲೋಕದಲ್ಲಿ ಯಜ್ಞ, ಯಾಗಗಳು ನಡೆಯದಿದ್ದಾಗ ಭೂ ಲೋಕದಲ್ಲಿ ಮಳೆ ಬೆಳೆ ಇಲ್ಲದೆ ಭೀಕರ ಕ್ಷಾಮ ತಲೆದೋರುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಕಾಮಧೇನುಗಾಗಿ ದೇವಲೋಕಕ್ಕೆ ಹೋದ ಮಹರ್ಷಿ
ಜನರ ದಾರುಣ ಸ್ಥಿತಿಯಿಂದ ವಿಚಲಿತರಾದ ಜಾಬಾಲಿ ಮಹರ್ಷಿಗಳು, ದೇವತೆಗಳನ್ನು ತೃಪ್ತಿಗೊಳಿಸಿ ತನ್ಮೂಲಕ ಮಳೆ ಸುರಿಯುವಂತೆ ಮಾಡಲು ಒಂದು ಯಜ್ಞವನ್ನು ನಡೆಸಲು ನಿಶ್ಚಯಿಸಿದರು. ಅದಕ್ಕಾಗಿ ಅವರು ದೇವಲೋಕಕ್ಕೆ ತೆರಳಿ ಯಜ್ಞಕ್ಕೆ ಸಹಾಯಕವಾಗುವಂತೆ ಕಾಮಧೇನುವನ್ನು ತಮ್ಮೊಡನೆ ಕಳುಹಿಸಿ ಕೊಡಲು ದೇವೇಂದ್ರನಲ್ಲಿ ವಿನಂತಿಸಿದರು
.ಭೂ ಲೋಕಕ್ಕೆ ತೆರಳು ನಿರಾಕರಿಸಿ ನಂದಿನಿ
ಆದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಕರೆದೊಯ್ಯಲು ದೇವೇಂದ್ರನು ಅನುಮತಿಸಿದನು. ಅದಕ್ಕಾಗಿ ಮಹರ್ಷಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೂಲೋಕದ ಜನರನ್ನು ನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು. ನಂದಿನಿಗೆ ಶಾಪವಿತ್ತ ಮಹರ್ಷಿ ಇದರಿಂದ ಮನನೊಂದ ಮಹರ್ಷಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ನಂದಿನಿಯನ್ನು ಶಪಿಸಿದರು. ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು.
ನದಿಯಾಗಿ ಹರಿದ ನಂದಿನಿ
ಅದರಂತೆಯೇ ನಂದಿನಿಯು ನಡೆದುಕೊಂಡಾಗ ಪ್ರತ್ಯಕ್ಷಳಾದ ಆದಿಶಕ್ತಿಯು ಋಷಿವಾಕ್ಯವನ್ನು ಸುಳ್ಳಾಗಿಸುವುದು ಅಸಾಧ್ಯವಾದ್ದರಿಂದ ನಂದಿನಿಯು ನದಿಯಾಗಿ ಹರಿಯಲೇಬೇಕೆಂದೂ, ಮುಂದೆ ತಾನೇ ಅವಳ ಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೊಡುವುದಾಗಿಯೂ ಅಭಯವನ್ನಿತ್ತಳು. ಇದರಿಂದ ಸಮಾಧಾನಗೊಂಡ ನಂದಿನಿಯು ಮಾಘ ಶುಧ್ಧ ಪೂರ್ಣಿಮೆಯಂದು ಕನಕಗಿರಿಯಿಂದ ನದಿಯಾಗಿ ಹರಿದಳು. ಇದರಿಂದ ಭೂಮಿಯು ಮತ್ತೆ ಹಸುರಿನಿಂದ ಕಂಗೊಳಿಸಲಾರಂಭಿಸಿತು.

ವರ ಪಡೆದ ಅರುಣಾಸುರ
ಇತ್ತ ಅರುಣಾಸುರನು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ತನಗೆ ತ್ರಿಮೂರ್ತಿಗಳಿಂದಾಗಲೀ, ದೇವತೆಗಳಿಂದಾಗಲೀ, ಪುರುಷರಿಂದ ಅಥವಾ ಸ್ತ್ರೀಯರಿಂದಲಾಗಲೀ, ಚತುಷ್ಪದಿಗಳಿಂದಲಾಗಲೀ, ಷಟ್ಪದಿಗಳಿಂದಲಾಗಲೀ ಮರಣ ಬಾರದಂತೆ ವರವನ್ನು ಪಡೆದಿದ್ದನು.
ಆದಿಶಕ್ತಿಯ ಮೊರೆಹೋದ ತ್ರಿಮೂರ್ತಿಗಳು
ಸರಸ್ವತೀ ದೇವಿಯೂ ಕೂಡ ಅವನಿಗೆ ಗಾಯತ್ರೀ ಮಂತ್ರವನ್ನುಪದೇಶಿಸಿ ಅನುಗ್ರಹಿಸಿದ್ದಳು. ಇವೆಲ್ಲವುಗಳಿಂದ ಅತ್ಯಂತ ಬಲಿಷ್ಠನಾದ ಅವನು ದೇವಲೋಕಕ್ಕೆ ಆಕ್ರಮಣ ನಡೆಸಿ ಅದನ್ನು ತನ್ನ ವಶಪಡಿಸಿಕೊಂಡನು. ತಮ್ಮ ನೆಲೆಯನ್ನು ಕಳೆದುಕೊಂಡ ದೇವತೆಗಳು ತ್ರಿಮೂರ್ತಿಗಳ ಜೊತೆಗೂಡಿ ಸ್ವರ್ಗವನ್ನು ಮರಳಿ ವಶಪಡಿಸಿ ಕೊಡುವಂತೆ ಆದಿಶಕ್ತಿಯನ್ನು ಮೊರೆಹೊಕ್ಕರು.
ದರ್ಪದಿಂದ ಮೆರೆದ ಅರುಣಾಸುರ
ದೇವಿಯು, ಅರುಣಾಸುರನು ಗಾಯತ್ರೀ ಮಂತ್ರವನ್ನು ಉಪಾಸಿಸುವಷ್ಟು ಸಮಯ ತನಗೂ ಅವನನ್ನು ವಧಿಸುವುದು ಅಸಾಧ್ಯವೆಂದು ಹೇಳಿ, ದೇವಗುರು ಬೃಹಸ್ಪತಿಗಳ ಸಹಾಯದಿಂದ ಅವನನ್ನು ಗಾಯತ್ರೀ ಮಂತ್ರಪಠಣದಿಂದ ವಿಮುಖ ನನ್ನಾಗಿ ಮಾಡುವಂತೆ ತಿಳಿಸಿದಳು. ಅದರಂತೆಯೇ ಅರುಣಾಸುರನಲ್ಲಿಗೆ ತೆರಳಿದ ಬೃಹಸ್ಪತಿಗಳು ಅವನನ್ನು ಉಪಾಯದಿಂದ ಗಾಯತ್ರೀ ಮಂತ್ರದಿಂದ ವಿಮುಖನನ್ನಾಗಿಸಿದರು. ಇದರಿಂದ ಅರುಣಾಸುರನು ತಾನು ದೇವರಿಂದಲೂ ದೊಡ್ಡವನೆಂದು ಭಾವಿಸಲಾರಂಭಿಸಿದನು. ಋಷಿ ಮುನಿಗಳ ಯಜ್ಞವನ್ನು ಹಾಳುಗೆಡವಿ, ಎಲ್ಲರೂ ತನ್ನನ್ನೇ ಆರಾಧಿಸಬೇಕೆಂದು ಆಜ್ನೆ ವಿಧಿಸಿದನು

ಮೋಹಿನಿಯ ರೂಪ ಅಟ್ಟಹಾಸ
ಮಿತಿಮೀರಿದಾಗ ದೇವತೆಗಳಿಗೆ ಇತ್ತ ಮಾತಿನಂತೆ ದೇವಿಯು ಮೋಹಿನಿಯ ರೂಪವನ್ನು ತಾಳಿ ಅರುಣಾಸುರನ ಉದ್ಯಾನದಲ್ಲಿ ಸುತ್ತಾಡಲಾರಂಭಿಸಿದಳು. ಅರುಣಾಸುರನ ಮಂತ್ರಿಗಳಾದ ಚಂಡ ಪ್ರಚಂಡರು ಅವಳನ್ನು ನೋಡಿ, ಅರುಣಾಸುರನಿಗೆ ಅವಳ ಸೌಂದರ್ಯದ ಬಗ್ಗೆ ತಿಳಿಸಿದರು. ಅರುಣಾಸುರನು ಅವಳನ್ನು ಮದುವೆಯಾಗಲು ಉದ್ದೇಶಿಸಿ ಅವಳ ಬಳಿಗೆ ತೆರಳಿದನು. ತನ್ನ ಒಡೆಯರಾಗಿದ್ದ ಶುಂಭ ನಿಶುಂಭರನ್ನು ವಧಿಸಿದವಳು ಅವಳೇ ಎಂದು ತಿಳಿದು ಅವಳ ಮೇಲೆ ದಾಳಿ ಮಾಡಿದನು.
ದುಂಬಿ ರೂಪ ತಾಳಿದ ದೇವಿ
ಆಗ ದೇವಿಯು ಅಲ್ಲಿಯೇ ಸಮೀಪದಲ್ಲಿದ್ದ ಬಂಡೆಯೊಂದರಲ್ಲಿ ಅಂತರ್ಧಾನಳಾದಳು. ಅರುಣಾಸುರನು ಕೋಪದಿಂದ ಆ ಬಂಡೆಯನ್ನು ತನ್ನ ಖಡ್ಗದಿಂದ ಒಡೆಯಲು ಅದರಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಟ ದುಂಬಿಗಳು ಅವನನ್ನು ಕಚ್ಚಲಾರಂಭಿಸಿದವು. ದೇವಿಯು ಒಂದು ದೊಡ್ಡದಾದ ದುಂಬಿಯ ರೂಪವನ್ನು ತಾಳಿ ಅರುಣಾಸುರನನ್ನು ಕಚ್ಚಿ ಕೊಂದಳು. ದುರ್ಗಾ ಪರಮೇಶ್ವರೀ ಭ್ರಮರದ ರೂಪವನ್ನು ತಾಳಿದ್ದರಿಂದ ಭ್ರಾಮರಿ ಎಂದು ಪ್ರಖ್ಯಾತಿಯನ್ನು ಪಡೆದಳು. ದೇವತೆಗಳು, ಜಾಬಾಲಿ ಮಹರ್ಷಿಗಳು ದೇವಲೋಕದ ಕಲ್ಪವೃಕ್ಷದಿಂದ ತಂದ ಎಳನೀರಿನಿಂದ ರೌದ್ರ ರೂಪ ದಲ್ಲಿದ್ದ ದೇವಿಗೆ ಅಭಿಷೇಕವನ್ನು ಮಾಡಿ ಶಾಂತರೂಪವನ್ನು ಹೊಂದುವಂತೆ ಪ್ರಾರ್ಥಿಸಿದರು. ಅದರಂತೆಯೇ ದೇವಿಯು ನಂದಿನಿ ನದಿಯ ಮಧ್ಯದಲ್ಲಿದ್ದ ಒಂದು ಪುಟ್ಟ ದ್ವೀಪದಲ್ಲಿ ಲಿಂಗ ರೂಪದಲ್ಲಿ ದುರ್ಗಾ ಪರಮೇಶ್ವರೀ ಎಂಬ ಹೆಸರಿನಿಂದ ಉದ್ಭವಿಸಿದಳು.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ  ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಕಟೀಲು ಎಂಬ ಹೆಸರು ಬಂತು
ನಂದಿನಿಯ ಶಾಪ ವಿಮೋಚನೆಯಾಯಿತು. ನಂದಿನಿಯ ಕಟಿ (ಸೊಂಟ/ನಡು) ಭಾಗದಲ್ಲಿರುವ ಇಳೆ (ಭೂಮಿ) ಯಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರಾಯಿತು. ಪುಷ್ಪಾಲಂಕಾರ ಪೂಜೆ ಎಂದರೆ ದೇವರಿಗೆ ಇಷ್ಟ ಎನ್ನುವುದು ಭಕ್ತರ ನಂಬಿಕೆ. ಮಲ್ಲಿಗೆ ಹೂ ದೇವರಿಗೆ ಪ್ರೀಯವಂತೆ. ಆದರೆ ಸಂಪಿಗೆ ಹೂವನ್ನು ಇಲ್ಲಿ ದೇವರಿಗೆ ಅರ್ಪಿಸಲಾಗುವುದಿಲ್ಲ. ಬೆಂಕಿಯ ಕಾಳಗ ಪಟ್ಟೆ ಸೀರೆ ದೇವಿಗೆ ಏನಾದರೂ ಕೋರಿಕೊಂಡು ಪಟ್ಟೆಸೀರೆಯ ಹರಕೆ ನೀಡಿದ್ರೆ ದೇವಿ ಆ ಕೋರಿಕೆಯನ್ನು ಈಡೇರಿಸುತ್ತಾಳೆ ಎನ್ನುವುದು ಭಕ್ತರ ನಂಬಿಕೆ. ಹಾಗಾಗಿ ಇಲ್ಲಿ ಪ್ರತಿದಿನ ಸಾಕಷ್ಟು ಪಟ್ಟೆ ಸೀರೆ ಸೇವೆಗಳು ಕಾಣಸಿಗುತ್ತವೆ. ದುರ್ಗಾಪರಮೇಶ್ವರಿಯ ಜೊತೆಗೆ ಪರಿವಾರ ದೇವತೆಗೂ ಪೂಜೆ ನಡೆಯುತ್ತದೆ. ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇನ್ನೂ ಎಪ್ರಿಲ್ ತಿಂಗಳಲ್ಲಿ ವಾರ್ಷಿಕ ಪೂಜೆಯೂ ಅದ್ದೂರಿಯಾಗಿ ನಡೆಯುತ್ತದೆ. ಜಾತ್ರೆಯ ಸಂದರ್ಭದಲ್ಲಿ ಬೆಂಕಿಯ ಕಾಳಗ ಇಲ್ಲಿನ ಮತ್ತೊಂದು ವಿಶೇಷ. ನಿತ್ಯವೂ ಅನ್ನದಾಸೋಹವನ್ನು ನೀಡುತ್ತದೆ. ಅಕ್ಕ ಪಕ್ಕದ ಊರಿನ ಮಕ್ಕಳಿಗೆ ಅಕ್ಷರದಾಸೋಹವನ್ನೂ ನೀಡುತ್ತಿದೆ ಈ ಕ್ಷೇತ್ರ.

Tags: Durgaparameshwari Vidyalaya
ShareTweetSendShare
Join us on:

Related Posts

Astrology : ಗುಣಪಡಿಸುವ ಮಂತ್ರಗಳು! ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅಥವಾ ಬೆಳಕಿನ ರೂಪದಲ್ಲಿ ಕೇಳಿದರೆ ಬಾರದ ಯಾವುದೇ ಕಾಯಿಲೆ ದೂರವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?

Astrology : ಗುಣಪಡಿಸುವ ಮಂತ್ರಗಳು! ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅಥವಾ ಬೆಳಕಿನ ರೂಪದಲ್ಲಿ ಕೇಳಿದರೆ ಬಾರದ ಯಾವುದೇ ಕಾಯಿಲೆ ದೂರವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?

by Naveen Kumar B C
March 23, 2023
0

ಗುಣಪಡಿಸುವ ಮಂತ್ರಗಳು! ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅಥವಾ ಬೆಳಕಿನ ರೂಪದಲ್ಲಿ ಕೇಳಿದರೆ ಬಾರದ ಯಾವುದೇ ಕಾಯಿಲೆ ದೂರವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಕೆಳಗೆ ತಿಳಿಸಲಾದ...

IPL 2023 Toss

IPL 2023 : ಟಾಸ್ ನಂತರ ಪ್ಲೇಯಿಂಗ್ 11 ಆಯ್ಕೆ ಮಾಡಲು ಅವಕಾಶ; ಬದಲಾಗಲಿವೆ ಹಲವು ನಿಯಮಗಳು…. 

by Naveen Kumar B C
March 23, 2023
0

IPL 2023 : ಟಾಸ್ ನಂತರ ಪ್ಲೇಯಿಂಗ್ 11 ಆಯ್ಕೆ ಮಾಡಲು ಅವಕಾಶ; ಬದಲಾಗಲಿವೆ ಹಲವು ನಿಯಮಗಳು…. ಇಂಡಿಯನ್ ಪ್ರೀಮಿಯರ್ ಲೀಗ್ ನ  ಸೀಸನ್ 16  ಆರಂಭಕ್ಕೆ...

Suryakumar yadav

Suryakumar Yadav : ಸತತ ಡಕೌಟ್, ಸೂರ್ಯನಿಗೆ ಹಿಡಿದ ವೈಫಲ್ಯದ ಗ್ರಹಣ….

by Naveen Kumar B C
March 23, 2023
0

Suryakumar Yadav : ಸತತ ಡಕೌಟ್, ಸೂರ್ಯನಿಗೆ ಹಿಡಿದ ವೈಫಲ್ಯದ ಗ್ರಹಣ…. ಭವಿಷ್ಯದ ಸ್ಟಾರ್ ಬ್ಯಾಟ್ಸ್ ಮನ್, ಭಾರತದ ಎಬಿಡಿ, 360 ಡಿಗ್ರಿ ಪ್ಲೇಯರ್ ಎಂದೇ ಗುರುತಿಸಿಕೊಂಡಿರುವ...

crime murder

Andhra pradesh : ತಂಗಿಯ ಕುಡಿತದ ಚಟಕ್ಕೆ ಬೇಸತ್ತು, ಕೊಂದು ನದಿಗೆಸೆದ ಅಣ್ಣಂದಿರು….

by Naveen Kumar B C
March 23, 2023
0

Andra pradesh : ತಂಗಿಯ ಕುಡಿತದ ಚಟಕ್ಕೆ ಬೇಸತ್ತು, ಕೊಂದು ನದಿಗೆಸೆದ ಅಣ್ಣಂದಿರು…. ಇಬ್ಬರು ಅಣ್ಣ ತಮ್ಮಂದಿರುವ ಸೇರಿಕೊಂಡು ಸ್ವಂತ ತಂಗಿಯನ್ನೇ ಕೊಂದಿರುವ ಘಟನೆ ಆಂಧ್ರ ಪ್ರದೇಶದಲ್ಲಿ...

Ind vs Aus 3rd ODI

Ind vs Aus 3rd ODI : ಸುಲಭವಾಗಿ ಗೆಲ್ಲಬಹುದಾದ ಮ್ಯಾಚ್ ಸೋತು ಭಾರತ – ಸರಣಿ ಗೆದ್ದ ಆಸ್ಟ್ರೇಲಿಯಾ…  

by Naveen Kumar B C
March 23, 2023
0

Ind vs Aus 3rd ODI : ಸುಲಭವಾಗಿ ಗೆಲ್ಲಬಹುದಾದ ಮ್ಯಾಚ್ ಸೋತು ಭಾರತ – ಸರಣಿ ಗೆದ್ದ ಆಸ್ಟ್ರೇಲಿಯಾ… ಆಸ್ಟ್ರೇಲಿಯಾ ವಿರುದ್ಧದ ಸರಣಿ ನಿರ್ಣಾಯಕ ಮೂರನೇ...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology : ಗುಣಪಡಿಸುವ ಮಂತ್ರಗಳು! ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅಥವಾ ಬೆಳಕಿನ ರೂಪದಲ್ಲಿ ಕೇಳಿದರೆ ಬಾರದ ಯಾವುದೇ ಕಾಯಿಲೆ ದೂರವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?

Astrology : ಗುಣಪಡಿಸುವ ಮಂತ್ರಗಳು! ಈ ಮಂತ್ರಗಳನ್ನು 108 ಬಾರಿ ಪಠಿಸಿದರೆ ಅಥವಾ ಬೆಳಕಿನ ರೂಪದಲ್ಲಿ ಕೇಳಿದರೆ ಬಾರದ ಯಾವುದೇ ಕಾಯಿಲೆ ದೂರವಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?

March 23, 2023
IPL 2023 Toss

IPL 2023 : ಟಾಸ್ ನಂತರ ಪ್ಲೇಯಿಂಗ್ 11 ಆಯ್ಕೆ ಮಾಡಲು ಅವಕಾಶ; ಬದಲಾಗಲಿವೆ ಹಲವು ನಿಯಮಗಳು…. 

March 23, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram