UK ನಾಗರಿಕರಿಗೆ ಇ–ವೀಸಾ ಸೌಲಭ್ಯ ಪುನರಾರಂಭಿಸಲು ಭಾರತ ಸಿದ್ಧ…
ಕೋವಿಡ್ ಸಾಂಕ್ರಾಮಿಕದ ನಂತರ ಇದೇ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಳ್ಳಲಿರುವ ಯುನೈಟೆಡ್ ಕಿಂಗ್ಡಮ್ ನ ನಾಗರಿಕರಿಗಾಗಿ, ಇ-ವೀಸಾ ಸೌಲಭ್ಯವನ್ನು ಪುನರಾರಂಭಿಸಲು ಭಾರತ ಸಿದ್ಧವಾಗಿದೆ.
ಈ ಕುರಿತು ವಿವರ ನೀಡಿರುವ ಯುಕೆಯಲ್ಲಿನ ಭಾರತದ ರಾಯಭಾರಿ ವಿಕ್ರಮ್ ಕೆ. ದೊರೈಸ್ವಾಮಿ, ನಾಗರಿಕರಿಗೆ ಇ-ವೀಸಾ ಸೌಲಭ್ಯ ಒದಗಿಸಲಾಗುವುದು ಸದ್ಯದಲ್ಲೇ ಆ ದಿನಾಂಕ ಪ್ರಕಟಿಸಲಾಗುವುದು ಎಂದರು.
ಇ-ವೀಸಾ ಸೌಲಭ್ಯ ಪುನರಾಂಭ ಮಾಡುವುದರಿಂದ, ಯುಕೆಯಲ್ಲಿನ ಜನರು ಭಾರತಕ್ಕೆ ಪ್ರಯಾಣ ಮಾಡುವುದು ಸುಲಭವಾಗಲಿದೆ. ಇದು ಅಧ್ಯಯನ, ಉದ್ಯೋಗ ಮತ್ತಿತರ ಕಾರಣಗಳಿಗಾಗಿ ಭಾರತಕ್ಕೆ ಬರುವವರಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಭಾರತ, ಅತಿ ಹೆಚ್ಚಿನ ಯುಕೆ ಜನರಿಗೆ ಅಧ್ಯಯನ ವೀಸಾ ಹಂಚಿಕೆ ಮಾಡಿದೆ. ಕಳೆದ ನವೆಂಬರ್ 28ರಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ , ಭಾರತದ ಜೊತೆಗಿನ ಮುಕ್ತ ವ್ಯಾಪಾರ ಒಪ್ಪಂದದ ಪ್ರಾಮುಖ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ್ದರು.
E visas: India ready to resume e-visa facility for UK citizens