ಐಸ್‍ಲ್ಯಾಂಡ್: ಐಸ್ ಲ್ಯಾಂಡ್ ನಲ್ಲಿ ಭೂಮಿಯು ಬರೋಬ್ಬರಿ 800 ಬಾರಿ ಕಂಪಿಸಿದ್ದ ಅನುಭವವಾಗಿದ್ದು, ತುರ್ತು ಪರಿಸ್ಥಿತಿ (Emergency) ಘೋಷಿಸಲಾಗಿದೆ.
ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದ್ದು, ಜ್ವಾಲಾಮುಖಿ ಸ್ಫೋಟಕ್ಕೆ ಕಾರಣವಾಗಬಹುದು ಎನ್ನಲಾಗಿದೆ. ಅಕ್ಟೋಬರ್ ಅಂತ್ಯದಿಂದ ಇಲ್ಲಿಯವರೆಗೂ ದ್ವೀಪದಲ್ಲಿ ಸುಮಾರು 24,000 ಭೂಕಂಪಗಳು ದಾಖಲಾಗಿವೆ ಎಂಬ ಆತಂಕಕಾರಿ ಸಂಗತಿ ಗೊತ್ತಾಗಿದೆ.
ಬ್ಲೂ ಲಗೂನ್ ಜಿಯೋಥರ್ಮಲ್ ಸ್ಪಾ ಜ್ವಾಲಾಮುಖಿ ಸಾಧ್ಯತೆಯಿಂದಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ನಿರಾಶ್ರಿತರ ತಾಣಗಳನ್ನು ತೆರೆಯಲಾಗಿದ್ದು, ಜನರ ರಕ್ಷಣೆಗೆ ಮುಂದಾಗಲಾಗಿದ. ಆದರೆ, ಇದುವರೆಗೆ ಯಾವುದೇ ಸಾವು-ನೋವಿನ ವರದಿಯಾಗಿಲ್ಲ.