ಮೆಕ್ಸಿಕನ್ ಓಪನ್ ಟೆನಿಸ್ ಪಂದ್ಯಾವಳಿ ನಡೆಯುತ್ತಿದ್ದಾಗ ಸಂಭವಿಸಿದ ಭೂಕಂಪ !
ಮೆಕ್ಸಿಕನ್: ಮೆಕ್ಸಿಕನ್ ಓಪನ್ನಲ್ಲಿ ಅಲೆಕ್ಸಾಂಡರ್ ಜ್ವೆರೆವ್ ಮತ್ತು ಡೊಮಿನಿಕ್ ಕೊಯೆಫರ್ ನಡುವಿನ ಪಂದ್ಯದ ಸಮಯದಲ್ಲಿ ಭೂಕಂಪವು ಸಂಭವಿಸಿದೆ.
ಮೆಕ್ಸಿಕನ್ ಓಪನ್ ಟೆನಿಸ್ ಪಂದ್ಯಾವಳಿಯ ಮಧ್ಯ ಭೂಕಂಪನವು ಸಂಭವಿಸಿದ್ದರೂ, ಆಟಗಾರರಾದ ಅಲೆಕ್ಸಾಂಡರ್ ಜ್ವೆರೆವ್ ಮತ್ತು ಡೊಮಿನಿಕ್ ಕೊಯೆಫರ್ ಅದನ್ನು ಗಮನಿಸದೆ ತಮ್ಮ ಆಟದಲ್ಲಿ ಮಗ್ನರಾಗಿದ್ದರು.
When the earthquake hit in Acapulco 😳#AMT2021 pic.twitter.com/wVwFF6JuCs
— ATP Tour (@atptour) March 20, 2021
ಜ್ವೆರೆವ್ ಮತ್ತು ಕೊಯೆಫರ್ ನಡುವಿನ ಪಂದ್ಯದಲ್ಲಿ ಭೂಕಂಪವು ಸಂಭವಿಸಿದಾಗ ಕ್ಯಾಮೆರಾ ವಿಪರೀತವಾಗಿ ನಡುಗಿದ್ದು, ಸುಮಾರು 10 ಸೆಕೆಂಡುಗಳ ಕಾಲ ನಡೆಯಿತು. ಪಂದ್ಯಾವಳಿಯನ್ನು ಆಡುತ್ತಿರುವ ಮೆಕ್ಸಿಕನ್ ನಗರದ ಅಕಾಪುಲ್ಕೊದಿಂದ ಪೂರ್ವಕ್ಕೆ 125 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರಬಿಂದುವಿತ್ತು ಎಂದು ವರದಿಗಳು ತಿಳಿಸಿದೆ.
ಎಟಿಪಿ ಪ್ರವಾಸದ ಅಧಿಕೃತ ಟ್ವಿಟರ್ ಖಾತೆಯು ತಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್ನಲ್ಲಿ ಈ ನಂಬಲಾಗದ ವೀಡಿಯೊವನ್ನು ಹಂಚಿಕೊಂಡಿದೆ.