ನವದೆಹಲಿ: ಇತ್ತೀಚೆಗಷ್ಟೇ ಭಾರತದಲ್ಲಿ ಭೂಕಂಪ ಸಂಭವಿಸಿದ್ದು 62ಕ್ಕೂ ಅಧಿಕ ಜನರು ಸಾವನ್ನಪ್ಪಿ, 300ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ನಡೆದ ಬೆನ್ನಲ್ಲಿಯೇ ಭಾರತದ ಕೆಲವು ರಾಜ್ಯಗಳಲ್ಲಿ ಕೂಡ ಇದೇ ಅನುಭವವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಪಶ್ಚಿಮ ಬಂಗಾಳ (West Bengal) ಹಾಗೂ ಮಣಿಪುರದಲ್ಲಿ (Manipur) ಭೂಮಿ ಕಂಪಿಸಿದ್ದು, ಜನರು ಭಯಭೀತರಾಗಿದ್ದಾರೆ. ಬಾಂಗ್ಲಾ ಮತ್ತು ಮಾಯಾನ್ಮಾರ್ ಗಡಿಯಲ್ಲಿ ಭೂಮಿ ಕಂಪಿಸಿದೆ. 1 ಗಂಟೆ ಅಂತರದಲ್ಲಿ ಪಶ್ಚಿಮ ಬಂಗಾಳ ಹಾಗೂ ಮಣಿಪುರದಲ್ಲಿ ಭೂಕಂಪನವಾಗಿದೆ. ಪಶ್ಚಿಮ ಬಂಗಾಳದಲ್ಲಿ 3.5 ತೀವ್ರತೆಯಲ್ಲಿ ಭೂಮಿ ಕಂಪಿಸಿದ್ದು, ಉದ್ದ 89.82 ಕಿಮೀ, 5 ಕಿಮೀ ಆಳದಲ್ಲಿ ಕಂಪನವಾಗಿದೆ.
ಮಣಿಪುರದ ಕಾಂಜೊಂಗ್‌ನಲ್ಲಿ ಉದ್ದ 94.31 ಕಿಮೀ, 35 ಕಿಲೋಮೀಟರ್ ಆಳದಲ್ಲಿ 3.0 ತೀವ್ರತೆಯಲ್ಲಿ ಕಂಪನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.








