ಪ್ರೇಮಿಗಳ ದಿನಕ್ಕೆ ಎದೆ ಬಡಿತ ಹೆಚ್ಚಿಸಿದ ಏಕ್ ಲವ್ ಯಾ ಸಿನಿಮಾ….
ಪ್ರೇಮಿಗಳ ದಿನದ ಪ್ರಯುಕ್ತ ಹಲವು ಸಿನಿಮಾಗಳು ಹಾಡು ಪೋಸ್ಟರ್ ರಿಲೀಸ್ ಮಾಡಿ ಪ್ರಚಾರ ಕಾರ್ಯ ನಡೆಸುತ್ತಿವೆ. ತಯಾರಾಗುವ ಸಿನಿಮಾಗಳಲ್ಲಿ ಬಹುಪಾಲು ಸ್ಟೋರಿಗಳು ಲವ್ ಸ್ಟೋರಿ ಕುರಿತೆ ಇರುವುದರಿಂದ ಸ್ಯಾಂಡಲ್ ವುಡ್ ಕೂಡ ವ್ಯಾಲೆಂಟೈನನ್ಸ್ ಡೇ ಗೆ ಕಾಯುತ್ತಿರುತ್ತದೆ.
ಜೋಗಿ ಪ್ರೇಮ್ ನಿರ್ದೇಶನದ ಬಹುನಿರೀಕ್ಷೆಯ ಸಿನಿಮಾ ‘ಏಕ್ ಲವ್ ಯಾ’ ಸಿನಿಮಾಕೂಡ ಪ್ರೇಮಿಗಳ ದಿನಕ್ಕೆ ಹಾಡು ಬಿಡುಗಡೆಗೆ ಮಾಡಿದೆ. ರಚಿತಾ ರಾಮ್, ರಾಣಾ ಹಾಗೂ ರೀಷ್ಮಾ ನಾಣಯ್ಯ ಅಭಿನಯದ ಸಿನಿಮಾದ ಹಾಡುಗಳು ಮತ್ತು ಟೀಸರ್ ಈಗಾಗಲೆ ಹಿಟ್ ಆಗಿವೆ.
ಪ್ರೇಮಿಗಳ ದಿನದಂದು ಪ್ರೇಮಿಗಳಿಗಾಗಿ ಎದೆ ಬಡಿತ ಹೆಚ್ಚಾಗಿದೆ ಎನ್ನುವ ವಿಡಿಯೋ ಸಾಂಗ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ರಾಣಾ ಹಾಗೂ ರೀಷ್ಮಾ ನಾಣಯ್ಯ ಕಾಂಬಿನೇಷನ್ ಸಾಂಗ್ ನಲ್ಲಿ ಸಾಂಗ್ ಮೂಡಿಬಂದಿದೆ.