ಕೊಪ್ಪಳದಲ್ಲಿ ಏಕ್ ಲವ್ ಯಾ ಟೀಮ್ ಮುಗಿಬಿದ್ದ ಅಭಿಮಾನಿಗಳು
ಬಿಡುಗಡೆಯಾದ ದಿನದಿಂದ ಉತ್ತಮ ಪ್ರದರ್ಶನ ಕಾಣುತ್ತಿರುವ ಏಕ್ ಲವ್ ಯಾ ಚಿತ್ರ ಟೀಮ್ ಟೀಮ್ ರಾಜ್ಯ ಪ್ರವಾಸವನ್ನ ಹಮ್ಮಿಕೊಂಡಿದೆ. ನಿನ್ನೆ ಕೊಪ್ಪಳ ಬಳ್ಳಾರಿ ಸೇರಿದಂತೆ ಹಲವು ಕಡೆಗಳಲ್ಲಿ ಥಿಯೇಟರ್ ಗೆ ಬೇಟಿ ನೀಡಿದೆ.
ಈ ವೇಳೆ ನಿರ್ದೇಶಕ ಮತ್ತು ನಟ ಪ್ರೇಮ ಮತ್ತು ನಟಿ ರಕ್ಷಿತಾ ಅವರನ್ನ ನೋಡಲು ಜನ ಮುಗಿಬಿದ್ದರು. ಥಿಯೇಟರ್ ಗಳ ಮುಂದೆ ಪಟಾಕಿ ಸಿಡಿಸಿ ಸಂಭ್ರಮದಿಂದ ಚಿತ್ರತಂಡವನ್ನ ಬರಮಾಡಿಕೊಂಡರು.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿರುವ ಶಿವ ಚಿತ್ರಮಂದಿರಕ್ಕೆ ರಕ್ಷಿತಾ ಬೇಟಿ ಕೊಟ್ಟಿದ್ದಾರೆ ಈ ವೇಳೆ ರೈತರು ಪ್ರೇಮ್ ಮತ್ತು ರಕ್ಷಿತಾಗೆ ಹಸಿರು ಶಾಲು ಹೊದಿಸಿ ಸನ್ಮಾನ ಮಾಡಿದರು.
ನಟಿ ರಕ್ಷಿತಾ ನಿರ್ಮಾಣದ ಜೋಗಿ ಪ್ರೇಮ್ ನಿರ್ದೇಶನದ ರಾಣಾ ಅಭಿನಯದ ಏಕ್ ಲವ್ ಯಾ ಚಿತ್ರ ಬಿಡುಗಡೆಯಾಗಿ ಯಶ್ಸಸ್ವಿಯಾಗಿ ಪ್ರದರ್ದಶನ ಕಾಣುತ್ತಿದೆ. ಈ ಸಕ್ಸಸ್ ನ ಖುಷಿಯಲ್ಲಿ ಏಕ್ ಲವ್ ಯಾ ತಂಡ ರಾಜ್ಯ ಪ್ರವಾಸ ಮಾಡಿದೆ.