ಡೇಟಿಂಗ್ ಆಪ್ ನಲ್ಲಿ ಪರಿಚಯ.. 70 ಪ್ಲಸ್ ನಲ್ಲಿ ಲವ್.. ಆ ಮೇಲೆ ಮದ್ವೆ
ಪ್ರೀತಿಗೆ ವಯಸ್ಸಿನ ಸಂಬಂಧವಿಲ್ಲ. ಏಜ್ ಇಸ್ ಜಸ್ಟ್ ಎ ನಂಬರ್. ಈ ಡೈಲಾಗ್ ಗಳನ್ನು ಆಗಾಗ ಸಿನಿಮಾಗಳಲ್ಲಿ ನಾವು ಕೇಳುತ್ತಲೇ ಇರುತ್ತೇವೆ. ಆದ್ರೆ ಇಬ್ಬರು ವೃದ್ಧರು ಮಾತ್ರ 70ರ ಹರೆಯದಲ್ಲೂ ಆ ಮಾತುಗಳನ್ನು ಸತ್ಯವಾಗಿಸಿದ್ದಾರೆ.
ಅಷ್ಟಕ್ಕೂ ಈ 70 ಪ್ಲಸ್ ಲವ್ ಕಹಾನಿ ಮೊದಲಾಗಿದ್ದೇಗೆ ಎಂದರೇ 70 ವರ್ಷದ ಜಿಮ್ ಆಡಂ ಇತ್ತೀಚೆಗೆ ಕೊರೊನಾದಿಂದ ವಿಧಿಸಲಾಗಿದ್ದ ಲಾಕ್ ಡೌನ್ ನಲ್ಲಿ ತನಗೆ ಸಂಗಾತಿ ಬೇಕೆಂದುಕೊಂಡು 50 ಪ್ಲಸ್ ಮಹಿಳೆಗಾಗಿ ಆನ್ ಲೈನ್ ಡೆಟಿಂಗ್ ಆಪ್ ನಲ್ಲಿ ಲಾಗಿನ್ ಆಗಿದ್ದಾರೆ.
ಹಾಗೇ ಸಂಗಾತಿಗಾಗಿ ಹುಡುಕುತ್ತಿದ್ದ ಆಡಂ 79 ವಯಸ್ಸಿನ ರಿಟೈರ್ಡ್ ಇನ್ಸೂರೆನ್ಸ್ ಬ್ರೋಕರ್ ಆಡ್ರಿನಿ ಎಂಬುವರನ್ನು ಭೇಟಿಯಾಗಿದ್ದಾರೆ.
ಆಕೆ 33 ವರ್ಷಗಳ ಹಿಂದೆ ವಿಚ್ಚೇಧನ ತೆಗೆದುಕೊಂಡು ಒಂಟಿಯಾಗಿದ್ದರು. ಕೊನೆಗೆ ಒಬ್ಬರಿಗೊಬ್ಬರು ಇಷ್ಟವಾದ ಕಾರಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆಡಂ ನಾನು ಆ ಆಪ್ ಬಳಸಿದ ಕಡಿಮೆ ಸಮಯದಲ್ಲೇ ಆಡ್ರಿಯನ್ನ ನೋಡಿದೆ. ಪರಿಚಯವಾದ ಬಳಿಕ ಇಬ್ಬರು ಹತ್ತಿರವಾಗಲೂ ಹೆಚ್ಚು ದಿನ ಕೂಡ ಆಗಲಿಲ್ಲ. ಯಾಕಂದರೇ ಆಕೆ ಕೂಡ ನನ್ನಂತೇ ಕ್ರೇಜಿ ಪರ್ಸನ್ ಎಂದಿದ್ದಾರೆ.
ಈ ವರ್ಷ ಸೆಪ್ಟೆಂಬರ್ 25 ರಂದು ಈ ಇಬ್ಬರ ಪ್ರೇಮಬಂಧ ವಿವಾಹಬಂಧವಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಜಿಮ್. ಆಡ್ರಿ ಮದ್ವೆಯಾದ ಫೋಟೋಗಳು ವೈರಲ್ ಆಗುತ್ತಿವೆ.