ಹೆಚ್ಚು ಹೆಚ್ಚು ತಾಂತ್ರಿಕತೆಯ ಮೊರೆ ಹೋಗುತ್ತಿರುವ ಈ ಕಾಲದಲ್ಲಿ ಸೈಬರ್ ಕಳ್ಳರ ವಂಚನೆ ಕೂಡ ಹೆಚ್ಚಾಗುತ್ತಿದೆ. ಬ್ಯಾಂಕ್ ಖಾತೆಗಳಿಗೆ (Bank Account) ಇಲ್ಲಿಯವರೆಗೆ ಕನ್ನ ಹಾಕುತ್ತಿದ್ದ ಖದೀಮರು ಸದ್ಯ ವಿದ್ಯುತ್ ಬಿಲ್ ನಲ್ಲಿ (Electricity Online Bill) ಕೂಡ ವಂಚಿಸಿದ್ದಾರೆ.
ಬೆಸ್ಕಾಂ (BESCOM) ಅಧಿಕಾರಿಗಳು ಎಂದು ಹೇಳಿಕೊಂಡು ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳುವ ನೆಪದಲ್ಲಿ ಸೈಬರ್ ಕಳ್ಳರು ವ್ಯಕ್ತಿಯೊಬ್ಬರಿಂದ 53 ಸಾವಿರ ರೂ. ದೋಚಿದ್ದಾರೆ. ಕಾಡುಗೋಡಿ ನಿವಾಸಿ ನಾರಾಯಣ್ ಪ್ರಸಾದ್ ಎಂಬುವವರಿಗೆ ಮೋಸ ಮಾಡಿ 53 ಸಾವಿರ ರೂ. ಮೋಸ ಮಾಡಿದ್ದಾರೆ.
ಬೆಸ್ಕಾಂ ಅಧಿಕಾರಿಗಳು ಎಂದು ಹೇಳಿಕೊಂಡು ನಾರಾಯಣ್ ಪ್ರಸಾದ್ ಅವರಿಗೆ ಬಿಲ್ ಕಟ್ಟುವಂತೆ ಹೇಳಿದ್ದಾರೆ. ಕರೆಂಟ್ ಬಿಲ್ ಕಟ್ಟದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಸಿದಾಗ ನಾರಾಯಣ್ ಬಿಲ್ ಪಾವತಿಸಲು ಒಪ್ಪಿಕೊಂಡಿದ್ದಾರೆ. ನಂತರ ಒಂದು ಲಿಂಕ್ ಕಳಿಸಿ ಅದನ್ನು ಕ್ಲಿಕ್ ಮಾಡಿ ಫಾಲೋ ಮಾಡಿ ಎಂದು ಹೇಳಿ, ಯಾಮಾರಿಸಿದ್ದಾರೆ. ನಂತರ ಖದೀಮರು ಹಂತಹಂತವಾಗಿ ಅಕೌಂಟ್ ನಿಂದ 53 ಸಾವಿರ ದೋಚಿದ್ದಾರೆ. ಈ ಕುರಿತು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ನಾರಾಯಣ್ ಪ್ರಸಾದ್ ದೂರು ದಾಖಲಾಗಿದೆ.








