ಮೈಸೂರು : ನಾಗರಹೊಳೆ ಅರಣ್ಯದಲ್ಲಿ ಸಫಾರಿ ವಾಹನಗಳ (Safari Vehicle) ಮೇಲೆಯೇ ಆನೆ ದಾಳಿ ನಡೆಸಲು ಯತ್ನಿಸಿರುವ ಘಟನೆ ನಡೆದಿದೆ.
ಹುಣಸೂರು ತಾಲೂಕಿನ ನಾಗರಹೊಳೆ ಅರಣ್ಯ ಪ್ರದೇಶದ ಕುಟ್ಟ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ದೃಶ್ಯ ಸಫಾರಿ ಮಾಡುತ್ತಿದ್ದ ಜನರ ಮೊಬೈಲ್ ಗಳಲ್ಲಿ ಸೆರೆಯಾಗಿದೆ. ಖಾಸಗಿ ವಾಹನ ನೋಡಿ ಓಡಿ ಬಂದ ಆನೆ ನಂತರ ಸಫಾರಿ ವಾಹನದ ಮೇಲೆ ದಾಳಿಗೆ ಮುಂದಾಗಿದೆ. ಎದುರಿನಲ್ಲಿ ಮತ್ತೊಂದು ಸಫಾರಿ ವಾಹನದ ಬಳಿಗೂ ಓಡಿ ಬಂದಿದೆ. ವಾಹನವನ್ನು ಹಿಮ್ಮುಖವಾಗಿ ಚಲಿಸಿದ ನಂತರ ಆನೆ ಮರಳಿ ಹೋಗಿದೆ. ಹೀಗಾಗಿ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ.