ಚಾಮರಾಜನಗರದಲ್ಲಿ ಕೊರೊನಾ ಮರಣಕೇಕೆ : 24 ಗಂಟೆಯಲ್ಲಿ 11ಮಂದಿ ಸಾವು
ಚಾಮರಾಜನಗರ : ಗಡಿನಾಡು ಚಾಮರಾಜನಗರದಲ್ಲಿ ಕೊರೊನಾ ಮರಣಕೇಕೆ ಮುಂದುವರೆದಿದೆ.
ಜಿಲ್ಲಾಕೋವಿಡ್ ಆಸ್ಪತ್ರೆಯಲ್ಲಿ 24 ಗಂಟೆಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ.
ಸೋಮವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ತನಕ ಇಬ್ಬರು ಕೊನೆಯುಸಿರೆಳೆದಿದ್ದರೇ ಸೋಮವಾರ ಸಂಜೆ 6 ರಿಂದ ಮಂಗಳವಾರ ಬೆಳಗ್ಗೆ 9 ಗಂಟೆಯ ತನಕ 9 ಮಂದಿ ಮೃತಪಟ್ಟಿದ್ದಾರೆ.
ಚಾಮರಾಜನಗರ ತಾಲ್ಲೂಕಿನ ಐವರು, ಯಳಂದೂರು ತಾಲ್ಲೂಕಿನ ಐವರು ಹಾಗೂ ಹನೂರು ತಾಲ್ಲೂಕಿನ ಒಬ್ಬರು ಕೊರೊನಾಗೆ ಬಲಿ ಯಾಗಿದ್ದಾರೆ.
ನಿನ್ನೆ ಕೂಡ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಮರಣ ಮೃದಂಗ ಬಾರಿಸಿತ್ತು.