ENG vs IND : ನಿರ್ಣಾಯಕ ಪಂದ್ಯದಲ್ಲಿ ಗೆಲುವು ಯಾರಿಗೆ..?
ಇಂಡೋ – ಆಂಗ್ಲೋ ಅಂತಿಮ ಹೋರಾಟಕ್ಕೆ ಮ್ಯಾಂಚೆಸ್ಟರ್ಸ್ ಅಂಗಳ ಸಜ್ಜಾಗಿದೆ.
ಸರಣಿ ವಿಜೇತರನ್ನು ನಿರ್ಧರಿಸುವ ಪಂದ್ಯಕ್ಕಾಗಿ ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ.
ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಚಾಂಪಿಯನ್ ಆಗಿ ಹೊರಹೊಮ್ಮಲಿದೆ.
ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಶುಭಾರಂಭ ಮಾಡಿತ್ತು.
ಮೊದಲ ಪಂದ್ಯದಲ್ಲಿ ಬೌಲಿಂಗ್ – ಬ್ಯಾಟಿಂಗ್ ನಲ್ಲಿ ಮಿಂಚಿದ್ದ ಟೀಂ ಇಂಡಿಯಾ ಆಟಗಾರರು 10 ವಿಕೆಟ್ ಗಳಿಂದ ಗೆಲುವು ಸಾಧಿಸಿದ್ದರು.
ಆದ್ರೆ ಎರಡನೇ ಪಂದ್ಯದಲ್ಲಿ ಸೀನ್ ರಿವರ್ಸ್ ಆಗಿತ್ತು. ಲಾರ್ಡ್ಸ್ ಅಂಗಳದಲ್ಲಿ ಭರ್ಜರಿ ಕಂ ಬ್ಯಾಕ್ ಮಾಡಿದ ಇಂಗ್ಲೆಂಡ್ ತಂಡ, ಭಾರತಕ್ಕೆ ಮಾಸ್ಟರ್ ಸ್ಟ್ರೋಕ್ ನೀಡಿತು.
ಪರಿಣಾಮ ಸರಣಿ 1- 1 ರಲ್ಲಿ ಸಮಬಲವಾಗಿದೆ. ಹೀಗಾಗಿ ಇಂದು ನಡೆಯಲಿರುವ ಮೂರನೇ ಪಂದ್ಯ ಸಾಕಷ್ಟು ಕುತೂಹಲ ಪಡೆದುಕೊಂಡಿದೆ.
ಇಂದಿನ ಪಂದ್ಯದಲ್ಲಿ ಗೆದ್ದವರಿಗೆ ಸರಣಿ ಗೆಲುವಿನ ಬಹುಮಾನ ಸಿಗಲಿದೆ.
ಅಂದಹಾಗೆ ಇಂದಿನ ಪಂದ್ಯಕ್ಕಾಗಿ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆಗಳು ತೀರಾ ಕಡಿಮೆ.
ಯಾಕಂದರೇ ಟೀಂ ಇಂಡಿಯಾ ಬ್ಯಾಟಿಂಗ್ – ಬೌಲಿಂಗ್ ನಲ್ಲಿ ಸಾಲಿಡ್ ಆಗಿದೆ.

ಕಳೆದ ಪಂದ್ಯವನ್ನು ಮರೆತು ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟರ್ ಗಳು ಅಬ್ಬರಿಸಲು ಪ್ಲಾನ್ ಮಾಡಿಕೊಂಡಿದ್ದಾರೆ.
ನಾಯಕ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮೊದಲ ಪಂದ್ಯದಲ್ಲಿ ಆಡಿದಂತೆ ಆಡುವುದು ಅನಿವಾರ್ಯ.
ವಿರಾಟ್ ಕೊಹ್ಲಿಯಿಂದ ಮ್ಯಾಜಿಕಲ್ ಇನ್ನಿಂಗ್ಸ್ ನಿರೀಕ್ಷೆ ಹೆಚ್ಚಿದೆ. ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯಾ, ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾಗೂ ಬ್ಯಾಟಿಂಗ್ ತಾಕತ್ತು ಇದೆ.
ಜಸ್‌ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಇಂಗ್ಲೆಂಡ್‌ನ ಬ್ಯಾಟಿಂಗ್ ಶಕ್ತಿಯನ್ನು ಟೆಸ್ಟ್ ಮಾಡಲಿದ್ದಾರೆ.
ಪ್ರಸಿಧ್ ಕೃಷ್ಣಗೆ ವಿಕೆಟ್ ಬೀಳುತ್ತಿಲ್ಲ. ಯಜುವೇಂದ್ರ ಚಹಲ್ ಸ್ಪಿನ್ ಮೂಲಕ ಎದುರಾಳಿಯನ್ನು ಕಾಡುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯಾ ಮತ್ತುಜಡೇಜಾ ಬೌಲಿಂಗ್ನಲ್ಲೂ ಕೈ ಜೋಡಿಸುತ್ತಾರೆ.
ಲಾರ್ಡ್ಸ್ನಲ್ಲಿ ಇಂಗ್ಲೆಂಡ್ ಗೆದ್ದರೂ ಸಾಕಷ್ಟು ಸುಧಾರಿಸಿಕೊಳ್ಳಬೇಕಿದೆ. ಇಂಗ್ಲೆಂಡ್ ತಂಡಕ್ಕೆ ಆರಂಭಿಕರ ಕೊರತೆ ಎದ್ದು ಕಾಣುತ್ತಿದೆ. ಎರಡು ಪಂದ್ಯಗಳಲ್ಲಿ ಎರಡೆರಡು ಜೋಡಿ ಇನ್ನಿಂಗ್ಸ್ ಆರಂಭಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಜಾನಿ ಬೇರ್ ಸ್ಟೋವ್ ಮತ್ತು ಬೆನ್ ಸ್ಟೋಕ್ಸ್ ಕೂಡ ಲಯಕ್ಕೆ ಮರಳಬೇಕಿದೆ. ಜೋ ರೂಟ್ ಬದಲು ಹ್ಯಾರಿ ಬ್ರೂಕ್ ಆಡುವ ಸಾಧ್ಯತೆ ಇದೆ.
ಜೋಸ್ ಬಟ್ಲರ್ ಮತ್ತು ಲಿವಿಂಗ್ ಸ್ಟೋನ್ ಮೇಲೆ ಹೆಚ್ಚು ನಂಬಿಕೆ ಇದೆ. ಮೊಯಿನ್ ಅಲಿಯೂ ಟ್ರಂಪ್ ಕಾರ್ಡ್ ಆಲ್‌ರೌಂಡರ್.
ಡೇವಿಡ್ ವಿಲ್ಲಿ, ಬೈಡನ್ ಕಾರ್ಸ್, ಕ್ರೆಗ್ ಓವರ್ಟನ್, ಬೆನ್ ಸ್ಟೋಕ್ಸ್ ಮತ್ತು ಮೊಯಿನ್ ಅಲಿ ಬೌಲಿಂಗ್‌ನಲ್ಲಿ ಮತ್ತಷ್ಟು ಪರಿಣಾಮಕಾರಿ ಆದರೆ ಇಂಗ್ಲೆಂಡ್ ಚಿಂತೆ ದೂರವಾಗಲಿದೆ.
ಇನ್ನು ಮ್ಯಾಂಚೆಸ್ಟರ್ ಪಿಚ್ ನಲ್ಲಿ ಸ್ವಿಂಗ್ ಹೆಚ್ಚಾಗಿದೆ. ಇಂತಹ ಪಿಚ್ ಗಳಲ್ಲಿ ಟೀಂ ಇಂಡಿಯಾದ ಬೌಲರ್ ಗಳು ಅಬ್ಬರಿಸಿ ಬೊಬ್ಬಿರಿಯುತ್ತಾರೆ. ಆದ್ರೆ ಬ್ಯಾಟರ್ ಗಳು ಹೆಚ್ಚಾಗಿ ಎಡವಿದ್ದಾರೆ.