ENG vs NZ : ಡಾರಿಲ್ ಮಿಚೆಲ್ ಭಾರಿ ಸಿಕ್ಸರ್.. ಬಿಯರ್ ಗ್ಲಾಸ್ ನಲ್ಲಿ ಚೆಂಡು
ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದೆ.
ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್ ಬಾರಿಸಿದ ಬೃಹತ್ ಸಿಕ್ಸರ್, ಸ್ಟ್ಯಾಂಡ್‌ನಲ್ಲಿದ್ದ ಮಹಿಳೆಯ ಕೈಯಲ್ಲಿದ್ದ ಬಿಯರ್ ಗ್ಲಾಸ್ ಗೆ ಸೇರಿದೆ.
ನ್ಯೂಜಿಲೆಂಡ್ ಇನ್ನಿಂಗ್ಸ್ ನ 56 ಓವರ್ ನಲ್ಲಿ ಮಿಚೆಲ್ ಬೃಹತ್ ಸಿಕ್ಸರ್ ಬಾರಿಸಿದರು.

ಆದರೆ ಆ ಚೆಂಡು ಗ್ಯಾಲರಿಯಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಅಭಿಮಾನಿಯೊಬ್ಬರ ಬಿಯರ್ ಗ್ಲಾಸ್ ಒಳಗೆ ನೇರವಾಗಿ ಬಿದ್ದಿದೆ.
ಇದರಿಂದ ಗಾಜು ಒಡೆದು ಬಿಯರ್ ನೆಲಕ್ಕೆ ಬಿದ್ದಿದೆ.
ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಇಂಗ್ಲೆಂಡ್ ಆಟಗಾರ ಮ್ಯಾಥ್ಯೂ ಪಾಟ್ಸ್ ತನ್ನ ಸಹ ಆಟಗಾರರಿಗೆ ಏನಾಯಿತು ಎಂದು ಸನ್ನೆ ಮಾಡಿದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.