England Vs India 2nd ODI: ಟೀಂ ಇಂಡಿಯಾದ ಜೋರನ್ನ ತಗ್ಗಿಸೋರು ಯಾರು ?
ಏಕಪಕ್ಷೀಯವಾಗಿ ಸಾಗಿದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ವಿರುದ್ಧ 10 ವಿಕೆಟ್ ಗಳಿಂದ ಜಯ ಸಾಧಿಸಿದೆ.
ಗುರುವಾರ ನಡೆಯಲಿರುವ ಎರಡನೇ ಪಂದ್ಯವನ್ನೂ ಗೆದ್ದು ಭಾರತ ಮೂರು ಪಂದ್ಯಗಳ ಸರಣಿಯಲ್ಲಿ 2 – 0 ಮುನ್ನಡೆ ಸಾಧಿಸಿ ಸರಣಿಯನ್ನು ಕೈ ವಶ ಮಾಡಿಕೊಳ್ಳುವ ತವಕದಲ್ಲಿದೆ.
ಇತ್ತ ಮೊದಲ ಪಂದ್ಯದಲ್ಲಿ ಅತ್ಯಂತ ಹೀನಾಯವಾಗಿ ಸೋಲುಂಡಿರುವ ಇಂಗ್ಲೆಂಡ್, ಸೇಡು ತೀರಿಸಿಕೊಳ್ಳುವ ತವಕದಲ್ಲಿವೆ.
ಇಂದಿನ ಪಂದ್ಯದಲ್ಲಿ ಗೆಲ್ಲುವ ಮೂರು ಸರಣಿಯನ್ನು ಸಮಬಲ ಸಾಧಿಸುವ ಪ್ಲಾನ್ ಮಾಡಿಕೊಂಡಿದೆ.
ಅಂದಹಾಗೆ ಇಂಗ್ಲೆಂಡ್ ತಂಡಕ್ಕೆ ಹೋಲಿಕೆ ಮಾಡಿದ್ರೆ ಟೀಂ ಇಂಡಿಯಾ ಮೂರು ವಿಭಾಗದಲ್ಲಿ ಬಲಿಷ್ಠವಾಗಿದೆ.
ಬೌಲಿಂಗ್ ನಲ್ಲಿ ಬೊಂಬಾಟ್ ಆಗಿರುವ ಟೀಂ ಇಂಡಿಯಾ, ಬ್ಯಾಟಿಂಗ್ ನಲ್ಲಿ ಸಾಲಿಡ್ ಆಗಿದೆ.
ಫೀಲ್ಡಿಂಗ್ ವಿಭಾಗದಲ್ಲೂ ಕೂಡ ಅದ್ಭುತ ಫೀಲ್ಡರ್ ಗಳನ್ನು ಭಾರತ ತಂಡ ಹೊಂದಿದೆ.
ಇನ್ನು ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆಗಳು ಇಲ್ಲದೇ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ವಿರಾಟ್ ಕೊಹ್ಲಿ ಇಂಜೂರಿಯಿಂದ ಚೇತರಿಸಿಕೊಂಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಹೀಗಾಗಿ ಇಂದಿನ ಪಂದ್ಯದಿಂದಲೂ ಅವರು ದೂರ ಉಳಿಯುವ ಸಾಧ್ಯತೆಗಳಿವೆ.
ಆರಂಭಿಕರಾಗಿ ರೋಹಿತ್ ಶರ್ಮಾ ಧವನ್, ಮಿಡಲ್ ಆರ್ಡರ್ ನಲ್ಲಿ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಕಾಣಿಸಿಕೊಳ್ಳಲಿದ್ದಾರೆ.
ವಿಕೆಟ್ ಕೀಪರ್ ಸ್ಥಾನದಲ್ಲಿ ರಿಷಬ್ ಪಂತ್, ಕೆಳಕ್ರಮಾಂಕದಲ್ಲಿ ರವೀಂದ್ರ ಜಡೇಜಾ, ಶಮಿ, ಬುಮ್ರಾ, ಪ್ರಸಿದ್ಧ್, ಚಹಾಲ್ ಇರಲಿದ್ದಾರೆ.

ಇತ್ತ ಇಂಗ್ಲೆಂಡ್ ತಂಡದಲ್ಲೂ ಯಾವುದೇ ಬದಲಾವಣೆಗಳನ್ನು ನಿರೀಕ್ಷೆ ಮಾಡಿಲ್ಲ. ಬ್ಯಾಟಿಂಗ್ ವಿಭಾಗದಲ್ಲಿ ಇಂಗ್ಲೆಂಡ್ ತಂಡದಲ್ಲಿ ಬಿಗ್ ಹಿಟ್ಟರ್ ಗಳೇ ಇದ್ದಾರೆ.
ಬೌಲಿಂಗ್ ನಲ್ಲಿ ಕೂಡ ಇಂಗ್ಲೆಂಡ್ ಸ್ಟ್ರಾಂಗ್ ಇದೆ. ಮೊದಲ ಪಂದ್ಯವನ್ನು ಮರೆತು ಇಂದಿನ ಪಂದ್ಯದಲ್ಲಿ ಅಬ್ಬರಿಸುವ ಸಾಧ್ಯತೆಗಳಿವೆ.
ಪಿಚ್ ವಿಚಾರಕ್ಕೆ ಬಂದ್ರೆ ಲಾರ್ಡ್ಸ್ ಅಂಗಳ ಬ್ಯಾಟಿಂಗ್ ಫ್ರೆಂಡ್ಲಿಯಾಗಿದ್ದು, ಭಾರಿ ಸ್ಕೋರ್ ಅವಕಾಶವಿದೆ. ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ.
ತಂಡಗಳು :
ಭಾರತ: ರೋಹಿತ್ (ನಾಯಕ), ಧವನ್, ಶ್ರೇಯಸ್, ಸೂರ್ಯಕುಮಾರ್, ಪಂತ್, ಹಾರ್ದಿಕ್, ಜಡೇಜಾ, ಶಮಿ, ಬುಮ್ರಾ, ಪ್ರಸಿದ್ಧ್, ಚಹಾಲ್.
ಇಂಗ್ಲೆಂಡ್: ಬಟ್ಲರ್ (ನಾಯಕ), ರಾಯ್, ಬೈರ್‌ಸ್ಟೋ, ರೂಟ್, ಸ್ಟೋಕ್ಸ್, ಲಿವಿಂಗ್‌ಸ್ಟೋನ್, ಅಲಿ, ವಿಲ್ಲಿ, ಕಾರ್ಸ್, ಟಾಪ್ಲಿ, ಓವರ್‌ಟನ್/ಸ್ಯಾಮ್ ಕರ್ರಾನ್.