ಹೈದರಾಬಾದ್: ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಅತಿಥೇಯ ತಂಡ ಮೊದಲ ದಿನವೇ ಸರ್ವಪತನಗೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನ 64.3 ಓವರ್ ಗಳಲ್ಲಿ 246 ರನ್ ಗಳಿಗೆ ಸರ್ವಪತನ ಕಂಡಿದೆ. ಭಾರತೀಯ ಬೌಲರ್ ಗಳ ದಾಳಿಗೆ ಬೆಚ್ಚಿದ ಇಂಗ್ಲೆಂಡ್ ತಂಡ ಕೇವಲ 64.3 ಓವರ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು 246 ರನ್ ಗಳಿಗೆ ಆಲೌಟ್ ಆಗಿದೆ.
ಭಾರತೀಯ ತಂಡದ ಪರ ಆರ್. ಅಶ್ವಿನ್ 68 ರನ್ ಗಳಿಗೆ 3 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 88 ರನ್ ನೀಡಿ 3 ವಿಕೆಟ್ ಪಡೆದರು. ಅಕ್ಷರ್ ಪಟೇಲ್ 2 ವಿಕೆಟ್, ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದಿದ್ದಾರೆ.
ಇಂಗ್ಲೆಂಡ್ ಪರ ಆರಂಭಿಕರಾದ ಜ್ಯಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಅರ್ಧಶತಕದ ಜೊತೆಯಾಟ ನೀಡಿದರು. 20 ರನ್ ಗಳಿಸಿ ಜ್ಯಾಕ್ ಕ್ರಾಲಿ ಔಟಾದರು. ಓಲಿ ಪೋಪ್ ಕೇವಲ 1 ರನ್, ಬೆನ್ ಡಕೆಟ್ 35 ರನ್, ಸ್ಟೋಕ್ಸ್ 70 ರನ್, ಜೋ ರೂಟ್ 29 ರನ್, ಜಾನಿ ಬೈರ್‍ಸ್ಟೋವ್ 37 ರನ್, ಬೆನ್ ಫಾಕ್ಸ್ 4 ರನ್, ರೆಹಾನ್ ಅಹ್ಮದ್ 13 ರನ್, ಟಾಮ್ ಹಾಟ್ರ್ಲೀ 23 ರನ್, ಮಾರ್ಕ್ ವುಡ್ 11 ಗಳಿಸಿದರು.