ಇಡೀ ಜಗತ್ತು ಈಗ ಸೂಕ್ಷ್ಮ ಕಾಲಘಟ್ಟವನ್ನ ದಾಟುತ್ತಿದೆ –ಪ್ರಧಾನಿ ಮೋದಿ
ಇಡೀ ಜಗತ್ತು ಈಗ ಸೂಕ್ಷ್ಮವಾದ ಕಾಲದಲ್ಲಿ ಹಾದುಹೋಗುತ್ತಿದೆ. ಬಿಕ್ಕಟ್ಟು ಎಷ್ಟೇ ಪ್ರಬಲವಾಗಿದ್ದರೂ ಭಾರತದ ಪ್ರತಿಕ್ರಿಯೆ ಇನ್ನೂ ದೊಡ್ಡದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಉತ್ತರ ಪ್ರದೇಶದ ಮಿರ್ಜಾಪುರ್ ನಲ್ಲಿ ಮಾತನಾಡಿದರು.
ಆಪರೇಷನ್ ಗಂಗಾ ಅಡಿಯಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಉಕ್ರೇನ್ನಿಂದ ಸುರಕ್ಷಿತವಾಗಿ ಕರೆತರಲಾಗಿದೆ ಮತ್ತು ಇನ್ನೂ ಇರುವವರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಹೇಳಿದರು.
“ಇಡೀ ಜಗತ್ತು ಈಗ ಈ ಶತಮಾನದ ‘ನಜೂಕ್ ದೌರ್’ (ಸೂಕ್ಷ್ಮ ಕಾಲದ) ಮೂಲಕ ಹಾದುಹೋಗುತ್ತಿದೆ. ಇಂದು ಅನೇಕ ದೇಶಗಳು ಸಾಂಕ್ರಾಮಿಕ ರೋಗಗಳು, ಅಡಚಣೆಗಳು ಮತ್ತು ಅನಿಶ್ಚಿತತೆಯ ಬಿಕ್ಕಟ್ಟಿಗೆ ಸಿಲುಕಿವೆ. ಆದರೆ ಬಿಕ್ಕಟ್ಟು ಎಷ್ಟು ಆಳವಾಗಿದೆ ಎಂಬುದನ್ನು ನೀವು ನೋಡಿದ್ದೀರ ಅವುಗಳನ್ನು ಪರಿಹರಿಸಲು ಭಾರತದ ಪ್ರಯತ್ನ ಇನ್ನೂ ದೊಡ್ಡದಾಗಿದೆ,” ಎಂದು ಮೋದಿ ಹೇಳಿದರು.
ಉಕ್ರೇನ್-ರಷ್ಯಾ ಬಿಕ್ಕಟ್ಟನ್ನು ಪ್ರಸ್ತಾಪಿಸಿದ ಪ್ರಧಾನಿ, “ನಾವು ಉಕ್ರೇನ್ನಿಂದ ಸಾವಿರಾರು ವಿದ್ಯಾರ್ಥಿಗಳನ್ನು ಆಪರೇಷನ್ ಗಂಗಾ ಅಡಿಯಲ್ಲಿ ಸುರಕ್ಷಿತವಾಗಿ ಕರೆತಂದಿದ್ದೇವೆ ಮತ್ತು ಅಲ್ಲಿ ಉಳಿದಿರುವವರಿಗಾಗಿ ಇನ್ನೂ ನಮ್ಮ ವಿಮಾನಗಳು ಹಾರಟ ನಡೆಸುತ್ತಿವೆ ಎಂದು ಹೇಳಿದರು.
“ಕರೋನಾ ಅವಧಿಯಲ್ಲಿ, ಭಾರತವು ಆಪರೇಷನ್ ವಂದೇ ಭಾರತ್ ನಡೆಸುವ ಮೂಲಕ ವಿದೇಶದಲ್ಲಿ ಸಿಲುಕಿರುವ ಪ್ರತಿಯೊಬ್ಬ ನಾಗರಿಕರನ್ನು ಕರೆತಂದಿತು. ಆಪರೇಷನ್ ದೇವಿ ಭಾರತ್ ಅನ್ನು ಅಫ್ಘಾನಿಸ್ತಾನದಲ್ಲಿ ನಡೆಸಲಾಯಿತು. ಈಗ, ಭಾರತವು ಉಕ್ರೇನ್ನಲ್ಲಿರುವ ಪ್ರತಿಯೊಬ್ಬ ನಾಗರಿಕ ಮತ್ತು ವಿದ್ಯಾರ್ಥಿಯನ್ನು ಉಳಿಸುವಲ್ಲಿ ತೊಡಗಿದೆ” ಎಂದು ಅವರು ಹೇಳಿದರು.
ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ಪ್ರಧಾನಿ, ಉತ್ತರ ಪ್ರದೇಶದ ಮತದಾರರು “ಪರಿವಾರವಾದಿ’ (ರಾಜವಂಶಗಳು) ಮತ್ತು ‘ಮಾಫಿಯಾವಾದಿ’ಗಳನ್ನು (ಮಾಫಿಯಾ ಅಂಶಗಳನ್ನು ಬೆಂಬಲಿಸುವವರು) ಸೋಲಿಸಿ ಬಿಜೆಪಿ ಸರ್ಕಾರವನ್ನು ತರಬೇಕಾಗಿದೆ ಎಂದು ಹೇಳಿದರು.