ಜನ ಸಾಮನ್ಯರಿಗೆ ಮತ್ತೊಮ್ಮೆ ಶಾಕ್ – ಅಗತ್ಯ ಔಷಧಿಗಳ ಬೆಲೆ ಹೆಚ್ಚಳ
ನೋವು ನಿವಾರಕಗಳು, ಆ್ಯಂಟಿಬಯೋಟಿಕ್ಗಳು, ಸೋಂಕು ನಿವಾರಕ ಸೇರಿದಂತೆ ಅಗತ್ಯ ಔಷಧಿಗಳ ಬೆಲೆಗಳು ಏಪ್ರಿಲ್ನಿಂದ ಏರಿಕೆಯಾಗಲಿದ್ದು, ನಿಗದಿತ ಔಷಧಿಗಳಿಗೆ ಶೇ 10% ಬೆಲೆ ಹೆಚ್ಚಳಕ್ಕೆ ಸರ್ಕಾರ ಅನುಮತಿ ನೀಡಿದೆ.
ಭಾರತದ ಔಷಧಿ ಬೆಲೆ ಪ್ರಾಧಿಕಾರವು ಶುಕ್ರವಾರದಂದು ನಿಗದಿತ ಔಷಧಿಗಳಿಗೆ 10.7% ರಷ್ಟು ಬೆಲೆ ಏರಿಕೆಗೆ ಅನುಮತಿ ನೀಡಿದೆ. National List of Essential Medicines (ಎನ್ಎಲ್ಇಎಂ) ಅಡಿಯಲ್ಲಿ 800 ಕ್ಕೂ ಹೆಚ್ಚು ಔಷಧಗಳು ಏಪ್ರಿಲ್ನಿಂದ ಬೆಲೆ ಏರಿಕೆ ಕಾಣಲಿವೆ.
ಎನ್ಎಲ್ಇಎಂ ಪಟ್ಟಿಯಲ್ಲಿ ಪ್ಯಾರಸಿಟಮಾಲ್ನಂತಹ ಔಷಧಗಳು ಒಳಗೊಂಡಿದೆ, ಅಜಿಥ್ರೊಮೈಸಿನ್ನಂತಹ ಆಂಟಿಬಯೋಟಿಕ್ ಗಳನ್ನ ಬ್ಯಾಕ್ಟೀರಿಯಾದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ, ರಕ್ತಹೀನತೆ, ವಿಟಮಿನ್ಗಳು ಮತ್ತು ಖನಿಜಗಳು ಮತ್ತು ತೀವ್ರವಾಗಿ ಅಸ್ವಸ್ಥರಾಗಿರುವ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಕೆಲವು ಔಷಧಗಳು ಮತ್ತು ಸ್ಟೀರಾಯ್ಡ್ಗಳನ್ನು ಸಹ ಪಟ್ಟಿಯಲ್ಲಿ ಸೇರಿಸಲಾಗಿದೆ.
ಔಷಧಿ ಬೆಲೆ ನಿಯಂತ್ರಕದಿಂದ ಪ್ರತಿ ವರ್ಷ ನಿಗದಿತ ಔಷಧಿಗಳ ಬೆಲೆಗಳನ್ನು ಅನುಮತಿಸಲಾಗುತ್ತದೆ. ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚುತ್ತಿರುವ ಕಚ್ಚಾ ಮತ್ತು ತಯಾರಿಕಾ ವೆಚ್ಚದ ಕಾರಣಕ್ಕೆ ಉದ್ಯಮವು ಔಷಧಿ ಬೆಲೆಯನ್ನ ಗಣನೀಯ ಹೆಚ್ಚಳಕ್ಕೆ ಒತ್ತಾಯಿಸುತ್ತಿದೆ.