ಕೆಲವೇ ದಿನಗಳಲ್ಲಿ ಎಥೆನಾಲ್ ಬಳಸಿಕೊಂಡು ಚಲಿಸುವ ವಾಹನಗಳನ್ನು ಪರಿಚಯಿಸಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.5 ವರ್ಷಗಳಲ್ಲಿ ಪೆಟ್ರೋಲ್, ಭಾರತದಲ್ಲಿ ಬಳಕೆಯಲ್ಲಿ ಇರುವುದಿಲ್ಲ. ಮರುಬಳಕೆ ಮಾಡಬಹುದಾದ ಇಂಧನಗಳ ಉತ್ಪಾದನೆ ಹಾಗೂ ಬಳಕೆಯಲ್ಲಿ ಭಾರತ ದಾಪುಗಾಲು ಇಟ್ಟಿದ್ದು, ಎಥೆನಾಲ್ ಮೇಲೆ ಚಲಿಸುವ ವಾಹನಗಳ ಉತ್ಪಾದನೆ ಇದೇ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದ್ದಾರೆ.
ನಾಗ್ ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಬಜಾಜ್, ಟಿವಿಎಸ್ ಮತ್ತು ಹೀರೋ ಸ್ಕೂಟರ್ ಗಳು ಶೇ. 100ರಷ್ಟು ಎಥೆನಾಲ್ ನಿಂದ ಚಲಿಸಲಿವೆ. ಟೊಯೊಟಾ ಕಂಪನಿಯ ಕ್ಯಾಮ್ರಿ ಕಾರನ್ನು ಆಗಷ್ಟ್ ನಲ್ಲಿ ಬಿಡುಗಡೆ ಮಾಡಲಿದೆ. ಅದು ಶೇಕಡಾ 100ರಷ್ಟು ಎಥೆನಾಲ್ ಇಂಧನದಲ್ಲಿ ಚಲಿಸುತ್ತದೆ. ಇದಿಷ್ಟೇ ಅಲ್ಲದೇ ಇದು ಶೇಕಡಾ 40 ರಷ್ಟು ವಿದ್ಯುತ್ ಉತ್ಪಾದಿಸುತ್ತದೆ ಎಂದು ಹೇಳಿದ್ದಾರೆ.
ಎಥೆನಾಲ್, ಪೆಟ್ರೋಲಿಗಿಂತ 15 ರೂ. ಕಡಿಮೆಗೆ ಸಿಗಲಿದೆ. ಎಥೆನಾಲ್ ದರ ಕೇವಲ 60 ರೂ. ಇರಲಿದೆ., ಪ್ರತಿ ಲೀಟರ್ ಪೆಟ್ರೋಲ್ ದರವು ಕೆಲವೆಡೆ 105 ರೂ. ಕೂಡ ಇದೆ. ಎಥೆನಾಲ್ ಶೇಕಡಾ 40 ರಷ್ಟು ವಿದ್ಯುತ್ ಉತ್ಪಾದಿಸುತ್ತದೆ ಎದು ಹೇಳಿದ್ದಾರೆ.








