ಬೆಂಗಳೂರಿನ ರಾಜಾಜಿನಗರದ ಮಿಲ್ಕ್ ಕಾಲೋನಿಯ ಸ್ವಸ್ತಿಕ್ ಯುವಕರ ಸಂಘದಿಂದ ಅತ್ಯಂತ ದುಬಾರಿ ಹಾಗೂ ಸಿರಿವಂತ ಗಣಪನನ್ನು ಪ್ರತಿಷ್ಠಾಪಿಸಲಾಗಿದೆ.
ಈ ಮಿಲ್ಕ್ ಕಾಲೊನಿ ಗಣೇಶವು ಅದ್ದೂರಿಯಾಗುವ ವಿಷಯಕ್ಕೆ ಹೆಸರುವಾಸಿಯಾಗಿದೆ. 16 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಚಾಮರಾಜನಗರ ಜಿಲ್ಲೆಯ ಯಳಂದೂರು ಬಳೆ ಮಂಟಪ ಪ್ರತಿಕೃತಿ ಈ ಬಾರಿಯ ಆಕರ್ಷಣೆಯಾಗಿದೆ. 5.7 ಅಡಿ ಎತ್ತರದ ಐಶ್ವರ್ಯ ಗಣೇಶ ಮೂರ್ತಿಯ ಮೌಲ್ಯ 12 ಲಕ್ಷ ರೂ.ವರೆಗೆ ಖರ್ಚಾಗಿದೆ. ಸಾವಿರಾರು ಅಮೆರಿಕನ್ ಡೈಮಂಡ್, ನವರತ್ನಗಳಿಂದ ಇದು ಕಂಗೋಳಿಸುತ್ತಿದೆ. ಈ ಮೂರ್ತಿಯನ್ನು ಮುಂಬಯಿ ಹಾಗೂ ಹುಬ್ಬಳ್ಳಿಯಲ್ಲಿ ತಯಾರಿಸಲಾಗಿದೆ.
ಸೆ. 18ರಿಂದ 24ರ ವರೆಗೆ ಒಂದು ವಾರಗಳ ಕಾಲ ಕಲೆ, ಸಂಸ್ಕೃತಿ, ಸದಭಿರುಚಿಯ ಸಂಗೀತ ಸಂಜೆ, ಆಹಾರ ಮೇಳ, ಸಿಡಿಮದ್ದು ಸುಡುವುದ ಸೇರಿದಂತೆ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಚಿತ್ರ ನಟ ಶಿವರಾಜ್ ಕುಮಾರ್, ರಾಜ್ ಶೆಟ್ಟಿ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಗೀತ ಕಾರ್ಯಕ್ರಮಗಳು ಕೂಡ ಹಲವಾರು ಪ್ರಸಿದ್ಧ ಕಲಾವಿದರ ನೇತೃತ್ವದಲ್ಲಿ ನಡೆಯಲಿದೆ.