ಅಫ್ಘಾನಿಸ್ತಾನದಲ್ಲಿ, ಕಾಬೂಲ್ ಪ್ರಾಂತ್ಯದ ವಜೀರ್ ಮುಹಮ್ಮದ್ ಅಕ್ಬರ್ ಖಾನ್ ಗ್ರ್ಯಾಂಡ್ ಮಸೀದಿ ಬಳಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಆಂತರಿಕ ಸಚಿವಾಲಯದ ಅಬ್ದುಲ್ ನಫಿ ತಾಕೂರ್ ಪ್ರಕಾರ, ಶುಕ್ರವಾರ ಪ್ರಾರ್ಥನೆ ಸಲ್ಲಿಸಿದ ನಂತರ ಆರಾಧಕರು ಮಸೀದಿ ಆವರಣದಿಂದ ಹೊರಬರುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಸ್ಫೋಟದ ಸದ್ದು ಕೇಳಿದ ಕೆಲವೇ ಹೊತ್ತಿನಲ್ಲಿ ತಾಲಿಬಾನ್ ನೇತೃತ್ವದ ಭದ್ರತಾ ಪಡೆಗಳು ಸ್ಥಳಕ್ಕೆ ತಲುಪಿದವು
At least four killed by blast near mosque after Friday prayers in Afghan capital pic.twitter.com/2hgWxD5sVe
— PressTV Extra (@PresstvExtra) September 23, 2022
“ವಜೀರ್ ಮೊಹಮ್ಮದ್ ಅಕ್ಬರ್ ಖಾನ್ ಮಸೀದಿಯ ಮುಂಭಾಗದಲ್ಲಿ ಸಂಭವಿಸಿದ ಸ್ಫೋಟದಿಂದ ಗಾಯಗೊಂಡವರನ್ನು ಆಂಬುಲೆನ್ಸ್ಗಳು ಘಟನೆಯ ಸ್ಥಳದ ಸಮೀಪವಿರುವ ಆಸ್ಪತ್ರೆಗಳಿಂದ ವಜೀರ್ ಅಕ್ಬರ್ ಖಾನ್ ಆಸ್ಪತ್ರೆಗೆ ವರ್ಗಾಯಿಸಿವೆ ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ”